ಧಾರವಾಡ –
ಗ್ರಾಮ ಪಂಚಾಯತ್ ಚುನಾವಣೆ-2020
ಎರಡನೆ (ಡಿ.8) 94 ನಾಮಪತ್ರಗಳ ಸಲ್ಲಿಕೆಯಾಗಿವೆ.ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮಪಂಚಾಯತ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ ಆರಂಭವಾಗಿದ್ದು ಎರಡನೆ ದಿನವಾದ ಇಂದು (ಡಿ. 8) ವಿವಿಧ ಗ್ರಾಮಪಂಚಾಯತಿಗಳಲ್ಲಿ ಒಟ್ಟು 94 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಧಾರವಾಡ ತಾಲೂಕಿನಲ್ಲಿ ಇಂದು ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅನುಸೂಚಿತ ಜಾತಿಗೆ ಮಿಸಲಿರುವ ಸ್ಥಾನಗಳಿಗೆ ಎರಡು ನಾಮಪತ್ರಗಳು, ಅನುಸೂಚಿತ ಪಂಗಡಕ್ಕೆ ಮೀಸಲು ಇರುವ ಸ್ಥಾನಗಳಿಗೆ ನಾಲ್ಕು, ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಎರಡು, ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಒಂದು ಮತ್ತು ಸಾಮಾನ್ಯ ವರ್ಗಕ್ಕೆ ಇರುವ ಸ್ಥಾನಗಳಿಗೆ ಇಪ್ಪತ್ತೆಂಟು ಸೇರಿದಂತೆ ಒಟ್ಟು 37 ನಾಮಪತ್ರ ಸಲ್ಲಿಕೆಯಾಗಿವೆ.
ಅಳ್ನಾವರ ತಾಲೂಕಿನಲ್ಲಿ ಸಾಮಾನ್ಯ ವರ್ಗಕ್ಕೆ ಇರುವ ಸ್ಥಾನಗಳಿಗೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.ಕಲಘಟಗಿ ತಾಲೂಕಿನಲ್ಲಿ ಇಂದು ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಅನುಸೂಚಿತ ಜಾತಿಗೆ ಮಿಸಲಿರುವ ಸ್ಥಾನಗಳಿಗೆ ಆರು ನಾಮಪತ್ರಗಳು, ಅನುಸೂಚಿತ ಪಂಗಡಕ್ಕೆ ಮೀಸಲು ಇರುವ ಸ್ಥಾನಗಳಿಗೆ ಆರು, ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಒಂಬತ್ತು, ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಒಂದು ಮತ್ತು ಸಾಮಾನ್ಯ ವರ್ಗಕ್ಕೆ ಇರುವ ಸ್ಥಾನಗಳಿಗೆ 36 ಸೇರಿದಂತೆ ಒಟ್ಟು 58 ನಾಮಪತ್ರ ಸಲ್ಲಿಕೆಯಾಗಿವೆ.ಧಾರವಾಡ ತಾಲೂಕಿನ ಗ್ರಾಮಪಂಚಾಯತಿಗಳಿಗೆ ಇಂದು 33 ನಾಮಪತ್ರಗಳು, ಕಲಘಟಗಿ ತಾಲೂಕಿನ ಗ್ರಾಮಪಂಚಾತಿಗಳಿಗೆ 58 ನಾಮಪತ್ರಗಳು ಮತ್ತು ಅಳ್ನಾವರ ತಾಲೂಕಿನ ಗ್ರಾಮಪಂಚಾತಿಗಳಿಗೆ 03 ನಾಮಪತ್ರಗಳು ಸೇರಿ ಒಟ್ಟು 94 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.