ಬೆಂಗಳೂರು –
ಮಾನ್ಯ ಷಡಕ್ಷಾರಿ ಸರ್ ಮತ್ತು ನಮ್ಮ ಘನವೆತ್ತ ಸಂಘ ದವರಿಗ ನನ್ನದೊಂದು ಮನವಿ,ಶಿಕ್ಷಕರ ಸಧ್ಯದ ಪರಿಸ್ಥಿತಿ ನಮ್ಮೆಲ್ಲರಿಗೂ ಅರ್ಥ ಆಗಿದೆ ಅಂತ ಅಂದುಕೊಂಡಿದ್ದೇನೆ, ಆಗಿಲ್ಲ ಅನ್ನುವುದೇ ಆಗಿದ್ದರೆ ಎಲ್ಲ ಶಿಕ್ಷಕರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕೇಳಿಕೊಳ್ಳಿ ಈಗ ವಿಷಯಕ್ಕೆ ಬರೋಣ ಯಾರದ್ಧೋ ತಪ್ಪಿಗೆ ನಮಗ್ಯಾಕೆ ಶಿಕ್ಷೆ, ಶಿಕ್ಷಕರ ಕೊರತೆ ಇದ್ದರೆ ತುಂಬಿಕೊಳ್ಳಲಿ ಎಂದು ಬೇಡಿಕೆ ಇಟ್ಟಿದ್ದಾರೆ
ನಾವು ನಿಮ್ಮನ್ನು ಆಯ್ಕೆ ಮಾಡಿರುವುದು ನಮ್ ಸಮಸ್ಯೆ ಗಳನ್ನು ಬಗೆಹರಿಸಲು ಅಂತ ಸರಕಾರ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಸೇರಿಕೊಂಡು ನಿಮಗೆ ಇಷ್ಟ ಬಂದ ಹಾಗೆ ರೂಲ್ಸ ಮಾಡಲು ಆಲ್ಲ ನಿಮ್ಮ ಕೈಲಾಗದಿದ್ದರೆ ರಾಜಿ ನಾಮೆ ನೀಡಿ ಶಾಲೆಗೆ ಹೋಗಿ ಕರ್ತವ್ಯ ನಿರ್ವಹಿಸಿ, ಇಲ್ಲವಾ ದಲ್ಲಿ ಒಂದು ಶಾಶ್ವತ ಪರಿಹಾರ ಕೊಡಿಸಿ ನಿಮ್ಮ ಮಾತನ್ನು ಅಧಿಕಾರಿಗಳು ಕೆಳುತ್ತಿಲ್ಲವೆಂದರೆ ಎಲ್ಲ ಶಿಕ್ಷಕರಿಗೆ ತಿಳಿಸಿ ಒಂದು ಹೋರಾಟಕ್ಕೆ ಕರೆ ಕೊಡಿ,ಸಮಸ್ಯೆ ಪರಿಹರಿಸು ವವರೆಗೂ ರಾಜ್ಯಾದ್ಯಂತ ಶಾಲೆ ಬಹಿಷ್ಕರಿಸಿ ಆಗ ಎಲ್ಲ ಮಕ್ಕಳ ಪಾಲಕರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಏನು ಮಾಡಬೇಕು ಅದನ್ನು ಅವರೆ ಮಾಡುತ್ತಾರೆ, ಸುಮಾ ರು 15,18 ವರ್ಷಗಳಿಂದ ನರಕ ಯಾತನೆ ಅನುಭವಿಸು ತ್ತಿದ್ದೇವೆ,
ಹಾಗೆ ಷಡಕ್ಷಾರಿ ಸರ್ ನಿಮ್ಮಲ್ಲಿ ಒಂದು ಮನವಿ OTS (one time settlement) ಇದು ಒಳ್ಳೆಯ ಆಲೋಚನೆ ಆದರೆ ಇದು ಎಲ್ಲ ಶಿಕ್ಷಕರಿಗೆ ತಲುಪುವುದು ಕಷ್ಟ ಸಾಧ್ಯ ಇದಕ್ಕೆ ತುಂಬಾ ಸಮಯ ಬೇಕಾಗುತ್ತದೆ ಅದರ ಬದಲ ಶೇಕಡಾ 25% ಮಿತಿಯನ್ನು ತೆಗೆದು ಹಾಕಿಸಿ 7% 2% 2% ಅನ್ನು 14% 4% 4% ಮಾಡಿದರೆ ಎಲ್ಲರಿಗೂ ವರ್ಗಾವಣೆ ಖಚಿತವಾಗಿ ಆಗುತ್ತಿದೆ, % ಹೆಚ್ಚು ಮಾಡಲು ಕಾರಣನು ತಿಳಿಸುತ್ತೇನೆ 2 ವರ್ಷದಿಂದ ವರ್ಗಾವಣೆ ಆಗಿಲ್ಲ ಇದ ನಮ್ಮ ತಪ್ಪಲ್ಲ ಹಾಗಾಗಿ % ಮಿತಿಯನ್ನು ಹೆಚ್ಚಿಸಿ ಈ ಒಂದು ಲೇಖನವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಹಾಗೇ ಬಿತ್ತರಿಸಲಾಗಿದೆ.