ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಶಿಕ್ಷಕರ ಸಂಘಟನೆಯ ವಿರುದ್ದ ನಾಡಿನ ಶಿಕ್ಷಕರು ಸಿಡಿದೆದ್ದಿದ್ದಾರೆ.ಅಲ್ಲದೇ ಈ ಒಂದು ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಕೂಡಾ ವ್ಯಕ್ತವಾಗುತ್ತಿದ್ದು ಇದರಿಂದ ಮತ್ತು ಶಿಕ್ಷಕರ ಧ್ವನಿಯಾಗಿ ನಿಮ್ಮ ಸುದ್ದಿ ಸಂತೆ ಕೂಡಾ ನಿರಂತ ರವಾಗಿ ವರದಿಗಳನ್ನು ಪ್ರಕಟ ಮಾಡುತ್ತಿದ್ದು ಇದರಿಂದಾಗಿ ಸಂಘಟನೆಯ ನಾಯಕರು ಎಚ್ಚೇತ್ತುಕೊಂಡು ವಾಟ್ಸ್ ಆಪ್ ಗ್ರೂಪ್ ಗಳ ಸೆಟ್ಟಿಂಗ್ ಗಳನ್ನು ಬದಲಾವಣೆ ಮಾಡಿ ದ್ದಾರೆ
ರಾಜ್ಯದ ಶಿಕ್ಷಕರ ಆಕ್ರೋಶ ಕಂಡು ವಾಟ್ಸ್ ಆಪ್ ಗ್ರುಪ್ ಗಳನ್ನು ONLY ADMIN Setting ಮಾಡುತ್ತಿದ್ದಾರೆ KSPSTA ರಾಜ್ಯ ಪ್ರಧಾನ ಕಾರ್ಯದರ್ಶಿಗಳು.ಮಾನ್ಯ ಪ್ರಧಾನ ಕಾರ್ಯದರ್ಶಿಗಳೇ ಸೆಟಿಂಗ್ಸ್ ಬದಲಾವಣೆ ಮಾಡಬೇಡಿ ನೀವೇ ಬದಲಾವಣೆ ಆಗಿ ಅಂತಾ ಹೇಳುತ್ತಿ ದ್ದಾರೆ ಶಿಕ್ಷಕರು.ಇದರೊಂದಿಗೆ ಗ್ರೂಪ್ ನಲ್ಲಿ ಮುಕ್ತವಾಗಿ ಸಮಸ್ಯೆ ನೋವು ಹಂಚಿಕೊಳ್ಳುತ್ತಿದ್ದ ಶಿಕ್ಷಕರ ಧ್ವನಿ ಯನ್ನು ಹತ್ತಿಕ್ಕಿದ್ದಾರೆ.