ಬೆಂಗಳೂರು –
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೋನ ಜೊತೆಗೆ ಒಮಿ ಕ್ರಾನ್ ಸೋಂಕು ಹೆಚ್ಚುತ್ತಲೆ ಇದೆ.ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದ್ದು ಈ ನಡುವೆ ಸಾಂಕ್ರಮಿಕ ರೋಗ ಹೆಚ್ಚದಂತೆ ತಡೆಗಟ್ಟುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಎಲ್ಲಾ ರೀತಿ ಯಲ್ಲೂ ಮುಂದಾಗಿದೆ.ಈ ನಡುವೆ ತಜ್ಞರ ಸಮಿತಿ ಜೊತೆ ಸಭೆ ನಡೆಸಲಿದ್ದು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಸಂಜೆಯೇ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋ ಚನೆ ನಡೆಸಿದ ಬಳಿಕ ಮುಂದಿನ ಯೋಜನೆಗಳ ತೀರ್ಮಾ ನವನ್ನು ತೆಗೆದುಕೊಳ್ಳಲಾಗುವುದು.ಇನ್ನೂ ನೆರೆ ರಾಜ್ಯಗ ಳಲ್ಲಿ ಬಹಳ ವೇಗದಲ್ಲಿ ಸೋಂಕು ಹರಡುತ್ತಿದೆ.ಹೀಗಾಗಿ ತಜ್ಞರ ಸಮಿತಿ ಜೊತೆಗೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.ಇನ್ನೂ ಕೊರೊನಾ ನಿಯಂತ್ರಣ ಮಾಡಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊ ಳ್ಳಬಹುದು ಎನ್ನುವುದರ ಬಗ್ಗೆ ತಜ್ಞರ ಸಮಿತಿಯ ಸಲಹೆ ಯನ್ನು ಕೇಳಲಾಗಿದೆ ಅಂತ ಅವರು ಇದೇ ವೇಳೆ ಹೇಳಿದರು.






















