ಕೊಟ್ಟಾಯಂ –
ಪತ್ನಿಯರನ್ನು ವಿನಿಮಯ ಮಾಡಿಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದಂತೆ ಹೈಟೆಕ್ ಪ್ರಕರಣವನ್ನು ಕೇರಳದ ಕೊಟ್ಟಾಯಂ ಪೊಲೀಸರು ಭೇಧಿಸಿದ್ದಾರೆ.ಹೌದು ಈ ಒಂದು ಪ್ರಕರಣ ಸಂಬಂಧಿಸಿದಂತೆ ಕೇರಳ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.ಈ ಆರೋಪಿಗಳು ತಮ್ಮದೇ ಸೋಷಿಯಲ್ ಮೀಡಿಯಾ ಗ್ರೂಪ್ ಮಾಡಿ ಕೊಂಡು ಪತ್ನಿಯರನ್ನು ಅದಲು ಬದಲು ಮಾಡಿ ಸೆಕ್ಸ್ ದಂಧೆ,ಅಸಹಜ ಲೈಂಗಿಕ ಕ್ರಿಯೆ ದಂಧೆ ನಡೆಸುತ್ತಿದ್ದರು. ಫೇಸ್ ಬುಕ್, ವ್ಯಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಸಿಕೊಂಡು ಇವರ ದಂಧೆ ನಡೆಯುತ್ತಿತ್ತು.
ಈ ಪೈಕಿ ಕೆಲವು ಮಹಿಳೆಯರು ತಮ್ಮ ಸ್ವ ಇಚ್ಛೆಯಿಂದ ದಂಧೆಯಲ್ಲಿ ಭಾಗಿಯಾಗಿದ್ದರೆ ಮತ್ತೆ ಕೆಲವರು ಗಂಡಂದಿರ ಒತ್ತಾಯಕ್ಕೆ ಮಣಿದು ಈ ಕೆಲಸ ಮಾಡುತ್ತಿದ್ದರಿಂದ ಮಾನ ಸಿಕವಾಗಿ ಕುಗ್ಗಿದ್ದರು.ಸಧ್ಯ ಈ ಒಂದು ವಿಚಾರ ಕುರಿತು ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.