ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಅಂದಾಜು 3.75 ಕೋಟಿಗಳ ರೂಪಾಯಿ ವೆಚ್ಚ ದಲ್ಲಿ ನರೇಂದ್ರ ಗ್ರಾಮದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು
2021-22 ನೇ ಸಾಲಿನ ಕರ್ನಾಟಕ ನೀರಾವರಿ ಇಲಾಖೆ ನಿಗಮ ನಿಯಮಿತ ಅನುದಾನದಡಿಯಲ್ಲಿ ಅಂದಾಜು
50 ಲಕ್ಷ ಅನುದಾನದಲ್ಲಿ ನರೇಂದ್ರ ಗ್ರಾಮದಿಂದ ಮಂಗಳ ಗಟ್ಟಿಗೆ ಹೋಗುವ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ.2021-22 ನೇ ಸಾಲಿನಲ್ಲಿ ಅಂದಾಜು 75 ಲಕ್ಷ ರು ಅನುದಾನದಲ್ಲಿ ನರೇಂದ್ರ ಗ್ರಾಮದ ಮಳೇಪ್ಪಣ್ಣನ ಮಠದ ಹಿಂಬಾಗದಲ್ಲಿ ರಸ್ತೆ ಮತ್ತು ನಾಲಾ ನಿರ್ಮಾಣ ಕಾಮಗಾರಿ.ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ಜಿಲ್ಲೆ ಧಾರವಾಡ ತಾಲೂಕಿನ ಪಿ.ಬಿ (ಸರ್ವಿಸ್)ರಸ್ತೆಯಿಂದ ನರೇಂದ್ರ ಗ್ರಾಮದ ರಸ್ತೆಯ ಸುಧಾರಣೆ 0.000 ರಿಂದ 1.800 ಕಿ.ಮೀ. ರವರೆಗೆ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಮಳೆಪ್ಪಜ್ಜನ ಮಠದ ಶ್ರೀಗಳಾದ ಸಂಗಮೇಶ ದೇವರು ಎಪಿಎಂಸಿ ಅದ್ಯಕ್ಷರಾದ ಚನ್ನವೀರ ಗೌಡ ಪಾಟೀಲ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ನಿರಂಜನ ಉಪಾಧ್ಯಕ್ಷರಾದ ಆತ್ಮಾನಂದ ಹುಂಬೇರಿ, ಶಂಕರ ಕೋಮಾರ ದೇಸಾಯಿ,ಮಂಜುನಾಥ ಈಳಗೇರ, ಸುದತ್ತ ಮುತಾಲಿಕ ದೇಸಾಯಿ,ಈರಪ್ಪ ಗಂಟಿ, ಮಂಜು ನಾಥ್ ತಿರ್ಲಾಪುರ, ಶ್ರೀಮತಿ ಸುಶೀಲಾ ಪಾಟೀಲ,ನಾಗೇಶ ಹಟ್ಟಿಹೊಳಿ,ವಿಜಯ ದೇಶಮುಖ ಸೇರಿದಂತೆ ಅನೇಕ ಗಣ್ಯರು ಹಾಗೂ ಗುರು ಹಿರಿಯರು ಉಪಸ್ತಿತರಿದ್ದರು.