ಬೆಂಗಳೂರು –
ತಾಂತ್ರಿಕ ಕಾರಣಗಳಿಂದಾಗಿ ತಡೆಯಾಜ್ಞೆಯನ್ನು ನೀಡಲಾ ಗಿದ್ದ ಶಿಕ್ಷಕರ ವರ್ಗಾವಣೆಗೆನ್ಯಾಯಾಲಯ ತೆರವು ಮಾಡಿದ ಬೆನ್ನಲ್ಲೇ ಆರಂಭಗೊಳ್ಳಬೇಕಿದ್ದ ಶಿಕ್ಷಕರ ವರ್ಗಾವಣೆ ಮುಂದೂಡಿಕೆಯನ್ನು ಮಾಡಿ ಸಧ್ಯ ಇಲಾಖೆಯ ಆಯು ಕ್ತರು ನೂತನ ಕೌನ್ಸಿಲಿಂಗ್ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿದ್ದಾರೆ.
ಹೌದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ನ್ನು ಮುಂದೂಡಿಕೆ ಮಾಡಿ ಜನವರಿ 25 ರಿಂದ ಆರಂಭ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ
ಈ ಸಂಬಂಧ ನೂತನ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಕೂಡಾ ಪ್ರಕಟಿಸಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯು 2020-21ನೇ ಸಾಲಿನ ಅಂತರ ಘಟಕ ವಿಭಾಗದ ಹೊರ ಗಿನ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಜನವರಿ 25ಕ್ಕೆ ಮುಂದೂಡಿಕೆ ಮಾಡಿ ಹೊಸದಾದ ಆದೇಶದೊಂದಿಗೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಕೋರ್ಟ್ ತೀರ್ಪಿನ ಅನ್ವಯ ಈಗಾಗಲೇ ಕೈಗೆತ್ತಿಕೊಂಡಿ ರುವ ಮೈಸೂರು ವಿಭಾಗದ ಪ್ರೌಢ ಶಾಲಾ ಶಿಕ್ಷಕರು ಮುಖ್ಯ ಶಿಕ್ಷಕರ ಹಿಂದಿನ ಅರ್ಜಿಗಳ ಕೋರಿಕೆ,ಪರಸ್ಪರ ವರ್ಗಾವ ಣೆಗೆ ಸಂಬಂಧ ಜಿಲ್ಲಾ ಹಂತ,ವಿಭಾಗೀಯ ಹಾಗೂ ಅಂತರ್ ವಿಭಾಗೀಯ ಕೌನ್ಸಿಲಿಂಗ್ ಕಾರ್ಯಗಳು ಮಾತ್ರ ಜನವರಿ 14 ರಿಂದ 25ರವರೆಗೆ ನಡೆಯಲಿವೆ ಎಂದು ತಿಳಿಸಲಾಗಿದೆ.
ಇದರೊಂದಿಗೆ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್ ನ್ನು ಇಲಾಖೆಯ ಆಯುಕ್ತರು ನೀಡಿದ್ದಾರೆ ವರ್ಗಾವಣೆಗಾಗಿ ನೂತನ ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಕೂಡಾ ಪ್ರಕಟ ಮಾಡಿದ್ದಾರೆ.ಇನ್ನೂ ಮೈಸೂರು ವಿಭಾಗ ಸೇರಿದಂತೆ ರಾಜ್ಯಾಧ್ಯಂತ ಸರ್ಕಾರಿ ಪ್ರಾಥಮಿಕ ಶಾಲೆ,ಪ್ರೌಢ ಶಾಲೆಯ ಶಿಕ್ಷಕರು,ಮುಖ್ಯ ಶಿಕ್ಷಕರ ಹೊಸ ಅರ್ಜಿಗಳ ಕೋರಿಕೆ,ಪರಸ್ಪರ ವರ್ಗಾವಣೆ, ಜಿಲ್ಲೆ,
ವಿಭಾಗೀಯ ಹಾಗೂ ಅಂತರ್ ವಿಭಾಗಿಯ ಕೌನ್ಸಿಲಿಂಗ್ ಪ್ರಕ್ರಿಯೆಗಳು ಫೆಬ್ರವರಿ 4 ರಿಂದ ಆರಂಭವಾಗಿ ಫೆಬ್ರವರಿ 25ರವರೆಗೆ ನಡೆಯಲಿವೆ ಎಂದು ಉಲ್ಲೇಖವನ್ನು ಮಾಡ ಲಾಗಿದೆ.ಇದರೊಂದಿಗೆ ನೂತನ ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸ ಲಾಗಿದೆ.