ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಅದರಲ್ಲೂ ಶಿಕ್ಷಕರ ಪರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯ ಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈಗ ಶಿಕ್ಷಕರ ಪ್ರಮುಖ ಬೇಡಿಕೆ ಯಾಗಿರುವ OTS ವರ್ಗಾವಣೆ ಗೆ ಧ್ವನಿ ಎತ್ತಿದ್ದಾರೆ

ಈ ಒಂದು ವಿಚಾರ ಕುರಿತು ಇಂದು ಮಹತ್ವದ ಸಭೆಯೊಂ ದನ್ನು ಕರೆಯಲಾಗಿತ್ತು ಸುಧೀರ್ಘ ವಾದ ಈ ಒಂದು ಸಭೆಯಲ್ಲಿ ಒನ್ ಟೈಮ್ ಸೆಟಲ್ ಮೆಂಟ್ ವರ್ಗಾವಣೆ ಕುರಿತು ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಿ ನಂತರ ಪೂರಕವಾದ ದಾಖಲೆಗಳೊಂದಿಗೆ ಇಲಾಖೆಯ ಆಯುಕ್ತರಿಗೆ ಮನವಿ ನೀಡಿ ಒತ್ತಾಯ ವನ್ನು ಮಾಡಿದ್ದಾರೆ