ಬಳ್ಳಾರಿ – ಹಾವು ಕಚ್ಚಿ ಬಾಲಕಿಯೊಬ್ಬಳು ಸಾವಿಗೀಡಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಹುಲಿಕುಂಟೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಡಿಸೆಂಬರ್ 10 ರಂದು ಸಾಯಂಕಾಲ ತಮ್ಮ ಹೊಲದಲ್ಲಿದ್ದಾಗ 14 ವರ್ಷದ ಕೌಶಲ್ಯ ಎಂಬ ಬಾಲಕಿಗೆ ಹಾವು ಕಚ್ಚಿದೆ.

ಹಾವು ಕಚ್ಚಿದ ಕೂಡಲೇ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಿಸದೇ ಕೌಶಲ್ಯ(14) ಬಾಲಕಿ ಮೃತಪಟ್ಟಿದ್ದಾರೆ.ಮೃತ ಬಾಲಕಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿದ್ದು,ಬಾಲಕಿಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ,ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ರಾತ್ರಿ ಮೃತಪಟ್ಟಿದ್ದಾಳೆ.