ಬೆಂಗಳೂರು –
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಮೇ 31 ರವರೆಗೆ ವಿಸ್ತರಣೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಒತ್ತಾಯ ವನ್ನು ಮಾಡಿದ್ದಾರೆ.ಹೌದು ಈಗಾಗಲೇ ಬೇಸಿಗೆ ರಜೆಯನ್ನು ನಿಗದಿ ಮಾಡಿ ಇಲಾಖೆ ಆದೇಶವನ್ನು ಮಾಡಿದ್ದು ಇದರಿಂ ದಾಗಿ ಶಿಕ್ಷಕರಿಗೆ ತೊಂದರೆಯಾಗುತ್ತದೆ ಹೀಗಾಗಿ ರಜೆ ಅವಧಿಯನ್ನು ಕಡಿತಗೊಳಿಸಿದ್ದು ತಪ್ಪು ಈ ಕೂಡಲೇ ಶಿಕ್ಷಣ ಸಚಿವರು ಬೇಸಿಗೆ ರಜೆಯ ಅವಧಿಯನ್ನು ಮೇ 31 ರವರೆಗೆ ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವರಿಗೆ ಒತ್ತಾಯವನ್ನು ಮಾಡಿದ್ದಾರೆ.
ಸಧ್ಯ ಬಿಸಿಲಿನ ಪ್ರಖರತೆ ರಾಜ್ಯದಲ್ಲಿ ಹೆಚ್ಚಾಗಿದ್ದು ಹೀಗಾಗಿ ಈ ಒಂದು ಸಮಯದಲ್ಲಿ ತೊಂದರೆಯಾಗಬಾರದು ಎಂಬ ಒಂದೇ ಕಾರಣಕ್ಕಾಗಿ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಈ ಒಂದು ಬೇಸಿಗೆ ರಜೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.ಈ ಕುರಿತಂತೆ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದು ಒತ್ತಾಯವನ್ನು ಮಾಡಿದ್ದಾರೆ.