ಧಾರವಾಡ –
ಕಳೆದ ಹಲವು ದಿನಗಳಿಂದ ಕಳ್ಳತನದಿಂದ ನೆಮ್ಮದಿಯಾಗಿ ನಿಟ್ಟಿಸಿರು ಬಿಟ್ಟಿದ್ದ ಧಾರವಾಡ ಜನತೆಗೆ ಕಳ್ಳರು ಮತ್ತೆ ಶಾಕ್ ನೀಡಿದ್ದಾರೆ.ಮತ್ತೆ ನಗರದಲ್ಲಿ ಸರಣಿ ಕಳ್ಳತನ ಮಾಡಿದ್ದು ನಗರದ ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ಮಾಡಿದ್ದು ಮೂರು ನಾಲ್ಕು ಮನೆಗಳನ್ನು ಕಳ್ಳತನ ಮಾಡಿದ್ದಾರೆ.ಆಂಜನೇಯ ನಗರದ 4ನೇ ಕ್ರಾಸ್ ನಲ್ಲಿನ ಪ್ರಕಾಶ್ ದೊಡ್ಡಮನಿ ಸಿ ಆರ್ ಪಿಎಫ್ ಪೊಲೀಸ್ ಮನೆಗೆ ಮೊದಲು ಕಳ್ಳತನ ಮಾಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲ ಎಂದುಕೊಂಡು ಬೀಗ ಹಾಕಿದ್ದ ಮನೆಗೆ ಎಂಟ್ರಿ ಕೊಟ್ಟ ಖದೀಮರು ಕಂಪೌಂಡ್ ಜೀಗಿದು ಬಾಗಿಲು ಮುರಿದು ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ ಬಂಗಾರ ಮತ್ತು 60 ಸಾವಿರ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಇನ್ನೂ ಇದೇ ಕ್ರಾಸ್ ನಲ್ಲಿ ಮತ್ತೊಂದು ಬೀಗ ಹಾಕಿರುವ ಮನೆಗೆ ಎಂಟ್ರಿ ಕೊಟ್ಟ ಖದೀಮರು ಮನೆಯ ಬೀಗ ಹೊಡೆದು ಶಿವನಾಗ ಆಲದಮರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯಲ್ಲಿ ಏನು ಸಿಗದ ಹಿನ್ನಲೆಯಲ್ಲಿ ಪರಾರಿ ಯಾಗಿ ನಂತರ 8ನೇ ಕ್ರಾಸ್ ನಲ್ಲಿ ಬೀಗ ಹಾಕಿದ್ದ ರುದ್ರಪ್ಪ ಹನಜಿ ಅವರ ಮನೆಗೆ ಎಂಟ್ರಿ ಕೊಟ್ಟು ಟ್ರಜರಿ ಹೊಡೆದು ಮನೆಯಲ್ಲಿನ 10 ಸಾವಿರ ಕಳ್ಳತನ ಮಾಡಿದ್ದಾರೆ.
ಇದರೊಂದಿಗೆ ಬೀಗ ಹಾಕಿದ್ದ ಖಾಲಿ ಮನೆಯ ಬೀಗ ಹೊಡೆದು ಎಂಟ್ರಿ ಕೊಟ್ಟ ಖದೀಮರು ಮನೆಯಲ್ಲಿ ಏನು ಇಲ್ಲ ಎಂದುಕೊಂಡು ಬರಿಗೈಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.ಇನ್ನೂ ಈ ಒಂದು ವಿಚಾರ ತಿಳಿದ ಉಪನಗರ ಪೊಲೀಸ್ ಠಾಣೆಯ ಇನ್ಸಪೇಕ್ಟರ್ ರಮೇಶ್ ಹೂಗಾರ ಪಿಎಸ್ ಐ ಶ್ರೀಮಂತ ಹುಣಿಸಿಕಟ್ಟಿ ಮತ್ತು ಟೀಮ್ ನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇನ್ನೂ ಇದರೊಂದಿಗೆ ಡಿಸಿಪಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಪೊಟೊ ಮತ್ತು ವರದಿ ಶ್ರೀಮತಿ ಅಕ್ಷತಾ ಮಂಜು ಸರ್ವಿ ಸುದ್ದಿ ಸಂತೆ ಟೀಮ್