This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

Sports News

ಮೇ 16 ರಿಂದ ಶಾಲೆ ಆರಂಭ ಏಕರೂಪ ಶಿಕ್ಷಣ ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ…..

WhatsApp Group Join Now
Telegram Group Join Now

ಬೆಂಗಳೂರು –

ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ,ಅನುದಾನ ರಹಿತ,ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2022-23ನೆ ಶೈಕ್ಷಣಿಕ ಸಾಲಿನಲ್ಲಿ ಏಕ ರೂಪದ ಶೈಕ್ಷಣಿಕ ಚಟುವಟಿಕೆ ಗಳನ್ನು ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪಠ್ಯ ವಸ್ತುವಿನ ಬೋಧನೆಗೆ ಸಹಕಾರಿ ಯಾಗುವಂತೆ ಆಯೋಜಿಸಲಾಗಿದ್ದು ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲಾಗುವುದು.ಪೂರ್ಣ ಪ್ರಮಾ ಣದಲ್ಲಿ ಬಳಸಿಕೊಳ್ಳುವ ಮೂಲಕ ಕಲಿಕಾ ಚೇತರಿಕೆ ವರ್ಷ ವೆಂದು ಕಾರ್ಯಸೂಚಿಯನ್ನು ರೂಪಿಸಲಾಗಿದೆ.ಇನ್ನೂ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರ ಡಿಸಿದೆ.ಮಕ್ಕಳ ಶಾಲಾ ದಾಖಲಾತಿಯನ್ನು ಮೇ 16 ರಿಂದ ಆರಂಭಿಸಿ ಜುಲೈ 31ರೊಳಗೆ ಮುಕ್ತಾಯಗೊಳಿಸಲು ಸೂಚಿಸಿದೆ.ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ಅಡ್ಡಿಯಾಗಿದೆ.2021-22ನೆ ಶೈಕ್ಷಣಿಕ ಸಾಲಿನಲ್ಲಿ ಶೇ.50ರಿಂದ ಶೇ.60ರಷ್ಟು ದಿನಗಳು ಮಾತ್ರ ಭೌತಿಕವಾಗಿ ಶಾಲೆಗಳ ನಿರ್ವಹಣೆ ಮಾಡಲಾಗಿದೆ.
ಭೌತಿಕ ತರಗತಿಗಳು ನಡೆಯದ ಆನ್‌ಲೈನ್ ಸೇರಿದಂತೆ ಪರ್ಯಾಯ ವಿಧಾನಗಳ ಮೂಲಕ ಬೋಧನೆ ಮಾಡಿ ದರೂ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಉಂಟಾಗಿಲ್ಲ. ಇದನ್ನು ಮನಗಂಡು ಕಲಿಕಾ ಹಿನ್ನಡೆ ಅಥವಾ ಕಲಿಕಾ ಕೊರತೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯ ಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪಠ್ಯ ವಸ್ತುವಿನ ಬೋಧನೆಗೆ ಹಿನ್ನಡೆಯಾಗದಂತೆ ಆಯೋಜಿಸ ಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಎಲ್ಲ ಶಾಲೆಗಳಲ್ಲೂ ಅನುಷ್ಠಾನಗೊಳಿಸಲು ಸೂಚಿಸಿದೆ. ಜತೆಗೆ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ.ಮೊದಲ ಅವಧಿಯ ಶಾಲಾ ಕರ್ತವ್ಯದ ದಿನಗ ಳನ್ನು ಮೇ 16 ರಿಂದ ಅಕ್ಟೋಬರ್ 2ರ ವರೆಗೆ ಹಾಗೂ ಎರಡನೆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಅಕ್ಟೋ ಬರ್ 17 ರಿಂದ 2023ರ ಏಪ್ರಿಲ್ 10ರ ವರೆಗೆ ನಿಗದಿಪಡಿ ಸಲಾಗಿದೆ.ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16ರ ವರೆಗೆ, ಬೇಸಿಗೆ ರಜೆಯನ್ನು 2023ರ ಏಪ್ರಿಲ್ 11 ರಿಂದ ಮೇ 28ರ ವರೆಗೆ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗುವ 330 ದಿನಗಳಲ್ಲಿ 60 ದಿನಗಳು ಸರ್ಕಾರಿ ರಜಾ ದಿನಗಳಾಗಿವೆ. ಶಾಲಾ ಕರ್ತವ್ಯಕ್ಕೆ 270 ದಿನಗಳು ಲಭ್ಯವಿದ್ದು, ಅದರಲ್ಲಿ ನಾಲ್ಕು ದಿನ ಸ್ಥಳೀಯ ವಿವೇಚನಾ ರಜೆಗಳು ಸೇರಿವೆ. ದಸರಾ ರಜೆ ಹಾಗೂ ಇತರೆ ಸರ್ಕಾರಿ ರಜೆ ಸೇರಿ 10 ದಿನಗಳು ಒಳಗೊಂಡಿದ್ದು, ಒಟ್ಟಾರೆ 256 ದಿನಗಳು ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಲಭ್ಯವಾಗಲಿವೆ.ಪಠ್ಯೇತರ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕ್ರೀಡಾಕೂಟ,ವಿಜ್ಞಾನ ವಸ್ತು ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮ, ಅಣಕು ಸಂಸತ್ ಮೊದಲಾದವರಿಗೆ 10 ದಿನ,ಪರೀಕ್ಷೆಗಳು ಮತ್ತು ಸಿಸಿಇ ಮೌಲ್ಯಾಂಕನ ವಿಶ್ಲೇಷಣೆಗೆ 12 ದಿನ ಪೋಷಕರ ಸಭೆ ಶೈಕ್ಷಣಿಕ ಪ್ರವಾಸ,ಶಾಲಾ ಹಬ್ಬ ಮತ್ತಿತರ ಕಾರ್ಯಗಳಿಗೆ ಆರು ದಿನ ನಿದಗಿಪಡಿಸಿದ್ದು ಅಂತಿ ಮವಾಗಿ ಬೋಧನಾ ಕಲಿಕೆ ಪ್ರಕ್ರಿಯೆಗೆ 228 ದಿನಗಳು ಲಭ್ಯವಾಗಲಿವೆ.ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚ ರಣೆ,ಗಾಂಧಿ ಜಯಂತಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ,ಕರ್ನಾಟಕ ರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳನ್ನು ಆಯಾ ದಿನಗಳಂದು ಶಾಲೆಗ ಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಿದೆ.
ಅನಿರೀಕ್ಷಿತ ಕಾರಣಗಳಿಂದ ಶಾಲೆಗೆ ರಜೆ ಘೋಷಣೆಯಾ ದಲ್ಲಿ ಆ ಅವಯ ಶಾಲಾ ಕರ್ತವ್ಯವನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಬೇಕು ಎಂದು ಸೂಚಿಸಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk