ಬೆಂಗಳೂರು –
ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳು ಪ್ರಾರಂಭವಾಗು ವುದನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿಗಳಿಗೆ ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾ ಧ್ಯಕ್ಷ ಷಡಾಕ್ಷರಿ ಅವರು ಪತ್ರವನ್ನು ಬರೆದು ಒತ್ತಾಯವನ್ನು ಮಾಡಿದ್ದಾರೆ.ಅತ್ತ ಇವರು ಹೀಗೆ ಪತ್ರ ಬರೆಯುತ್ತಿದ್ದಂತೆ ಇದರ ಬೆನ್ನಲ್ಲೇ ಇವರ ಈ ಒಂದು ಕಾರ್ಯಕ್ಕೆ ಖಾಸಗಿ ಶಾಲೆಗಳ ಒಕ್ಕೂಟವು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದು ಪತ್ರ ಬರೆಯುವ ಮೂಲಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು ಮಕ್ಕಳ ಶಿಕ್ಷಣ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ದುರುದೃಷ್ಟಕರ ಸಂಗತಿ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ನಿರ್ವಹಣ ಸಂಘ (ರುಪ್ಸಾ) ಅಸಮಾಧಾನ ವ್ಯಕ್ತಪಡಿಸಿದ್ದು ಇನ್ನೂ ಈ ಒಂದು ವಿಚಾರ ಕುರಿತು ಷಡಾಕ್ಷರಿ ಅವರು ಮುಂದೇನು ಮಾಡತಾರೆ ಎಂಬೊಂ ದನ್ನು ಕಾದು ನೋಡಬೇಕು