ಬೆಂಗಳೂರು –
ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ – ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಇರಲಿದೆ.1, 2ನೇ ತರಗತಿ ಮಕ್ಕಳಿಗೆ ಇನ್ಮುಂದೆ ಮನೆ ಕೆಲಸ ಇರುವುದಿಲ್ಲ.ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.ರಾಜ್ಯಾದ್ಯಂತ 2022 23ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಶುರುವಾ ಗಿದೆ.ಈ ನಡುವೆ ಸದ್ಯದಲ್ಲಿಯೇ ಮಕ್ಕಳಿಗೆ ನೀಡುವ ಹೋಮ್ ವರ್ಕ್ ಗೆ ಬ್ರೇಕ್ ಬೀಳುವ ನಿರೀಕ್ಷೆ ಇದೆ ಇನ್ಮುಂದೆ ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ಕೊಡುವಂತಿಲ್ಲ.

ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದಲೇ ನಲಿ – ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಇರಲಿದೆ.1, 2ನೇ ತರಗತಿ ಮಕ್ಕಳಿಗೆ ಇನ್ಮುಂದೆ ಮನೆ ಕೆಲಸ ಇರುವುದಿಲ್ಲ.ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.ಹೋಮ್ ವರ್ಕ್ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.ಎನ್ಇಪಿ ಶಿಕ್ಷಣ ಕ್ರಮದ ಪ್ರಕಾರ ಸರ್ಕಾರಿ ಶಾಲೆ ಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ.ಆದರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ.ಇದರಿಂದ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತೆ ಎಂಬ ಮಾತು ಗಳು ಕೇಳಿ ಬರುತ್ತಿದೆ.ಹೀಗಾಗಿ ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡ ವಾಗಿದ್ದು ಆಟವಾಡುತ್ತಾ ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸು ಇಂತಹ ವಯಸ್ಸಿನಲ್ಲಿ ಕನಿಷ್ಟ 2ನೇ ತರಗತಿವರೆಗೆ ಹೋಂವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ.