ಧಾರವಾಡ –
ಧಾರವಾಡದ ಬಾಡ ಗ್ರಾಮದಲ್ಲಿ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಿಎಂ ಪರಿಹಾರ ವನ್ನು ಘೋಷಣೆ ಮಾಡಿದ್ದಾರೆ.ಹೌದು ಧಾರವಾಡದ ಬಾಡ ಗ್ರಾಮದ ಬಳಿ ನಡೆದಿದ್ದ ದುರ್ಘಟನೆಯಲ್ಲಿ ನಿಧನರಾದ ವರಿಗೆ ಪರಿಹಾರವನ್ನು ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಅವರಿಗೆ ಒತ್ತಾ ಯವನ್ನು ಮಾಡಿದ್ದರು.ಇವರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಪರಿಹಾರ ವನ್ನು ಘೋಷಣೆ ಮಾಡಿದ್ದಾರೆ
ಇಬ್ನೂ ಘಟನೆಯಲ್ಲಿ ಇಲ್ಲಿಯವರೆಗೆ 9 ಜನರ ಸಾವಿ ಗೀಡಾಗಿದ್ದು ಪ್ರತಿಯೊಬ್ಬರಿಗೂ ಐದು ಲಕ್ಷ ರೂಪಾಯಿ ಪರಿಹಾರ ವನ್ನು ಘೋಷಣೆ ಮಾಡಿದ್ದಾರೆ.ಟ್ವಿಟ್ ಮೂಲಕ ಸಿಎಂ ಪರಿಹಾರ ನಿಧಿಯ ಹಣ ಬಿಡುಗಡೆ ಮಾಡೋದಾಗಿ ಭರವಸೆ ನೀಡಿದ್ದಾರೆ.ಟ್ವಿಟ್ ಮೂಲಕ ಸಿಎಂ ಪರಿಹಾರ ನಿಧಿಯ ಹಣ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಪರಿಹಾರ ನೀಡುತ್ತಿದ್ದೇನೆಂದು ಸಿಎಂ ಹೇಳಿದ್ದಾರೆ.