ಹುಬ್ಬಳ್ಳಿ –
ಕಳೆದ ಮೂರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲಿದೆಯೇ ಅಧಿಕಾರ ನಡೆಸುತ್ತಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಜೊತೆಗೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಕೂಡ ಪೂರ್ಣಗೊಂಡಿದ್ದು ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಸಂಪೂರ್ಣ ಮಾಹಿತಿ ನಿಮ್ಮ ಸುದ್ದಿ ಸಂತೆಯಲ್ಲಿ
ಹೌದು……ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೋರೆ ಪರ ಹಾಗೂ ವಿರುದ್ಧ ಕೈ ಎತ್ತುವ ಮೂಲಕ ಮತ ಹಾಗೂ ಸಹಿ ಸಂಗ್ರಹಿಸಲಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೋರೆ ಪರ-35,ವಿರುದ್ಧ-51,ತಟಸ್ಥ-03 ಮತಗಳನ್ನು ಪಡೆದಿದ್ದಾರೆ.ಇನ್ನೂ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟ ಗೇರಿ ಪರ ಹಾಗೂ ವಿರುದ್ಧ ಕೈ ಎತ್ತುವ ಮೂಲಕ ಮತ ಹಾಗೂ ಸಹಿಗಳ ಸಂಗ್ರಹ ಪ್ರಾರಂಭವಾದ ಬೆನ್ನಲ್ಲೇ ಬಿಜೆಪಿ ಮೇಯರ್ ಅಭ್ಯರ್ಥಿ ಈರೇಶ ಅಂಚಟಗೇರಿಯವರಿಗೆ ಪರ -50, ವಿರುದ್ಧ-35 ತಟಸ್ಥ-03 ಮತಗಳ ಚಲಾವಣೆ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದು ಈ ಬಾರಿ ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ.
ಎಐಎಂಐಎಂ ಪಕ್ಷದ ಮೇಯರ್ ಅಭ್ಯರ್ಥಿ ನಜೀರ್ ಅಹ್ಮದ್ ಹೊನ್ಯಾಳವರಿಗೆ ಪರ-03, ವಿರುದ್ಧ-83 ತಟಸ್ಥ 03 ಮತಗಳ ಚಲಾವಣೆಯಾಗಿದೆ. ಮೇಯರ್ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ ಈಗ ಉಪಮೇಯರ್ ಸ್ಥಾನವನ್ನು ಕೂಡ ತನ್ನ ಮುಡಿಗೇರಿಸಿಕೊಂಡಿದ್ದು ಬಿಜೆಪಿಯ ಅಭ್ಯರ್ಥಿ ಉಮಾ ಮುಕುಂದ ಉಪಮೇಯರ್ ಆಗಿ ಆಯ್ಕೆಯಾಗಿದ್ದು ಮತ್ತೊಮ್ಮೆ ಪಾಲಿಕೆ ಅಧಿಕಾರ ಕಮಲ ಪಡೆಯ ತೆಕ್ಕೆಗೆ ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿ ದೀಪಾ ಸಂತೋಷ ನೀರಲಕಟ್ಟಿ ಎಂಬುವವರನ್ನು ಹಿಂದಿಕ್ಕಿದ ಉಮಾ ಮುಕುಂದ ಪರ- 51 ವಿರುದ್ಧ-35,ತಟಸ್ಥ-03 ಮತಗಳ ಚಲಾವಣೆಯ ಮೂಲಕ ಗೆಲುವು ಸಾಧಿಸಿದ್ದಾರೆ.ಇತ್ತ ಧಾರವಾಡ ದಲ್ಲಿ ಈರೇಶ ಅಂಚಟಗೇರಿ ಬೆಂಬಲಿಗರು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಇನ್ನೂ ಇದೇ ವೇಳೆ ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಅಧಿಕಾರವನ್ನು ಸ್ವೀಕಾರ ಮಾಡಿದ್ದು ಮೊದಲ ದಿನವೇ ತಮ್ಮ ಆಸನವನ್ನು ಅಲಂಕಾರ ಮಾಡಿದ್ದು ವಿಶೇಷವಾಗಿದೆ.