ಬೆಂಗಳೂರು –
11 ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವ ಣೆಗೊಳಿಸಿ ಭಾನುವಾರ ರಾತ್ರಿ ಆದೇಶ ಹೊರಡಿಸಿದೆ ಹೌದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಅವರನ್ನು ಅಭಿವೃದ್ಧಿ ಆಯುಕ್ತ ರನ್ನಾಗಿ ನೇಮಿಸಲಾಗಿದೆ.ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ.ರಜನೀಶ್ ಗೋಯಲ್ ಅವರನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿ ರುವ ವಂದಿತಾ ಶರ್ಮ ಈ ಹುದ್ದೆಯಲ್ಲಿದ್ದರು.
ಆರ್. ಉಮಾಶಂಕರ್- ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ,ರಶ್ಮಿ ವಿ. ಮಹೇಶ್- ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ,ಪಂಕಜ್ ಕುಮಾರ್ ಪಾಂಡೆ- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ)ಡಾ. ರಾಮ್ ಪ್ರಸಾದ್ ಮನೋಹರ್ ವಿ.- ವಿಶೇಷ ಆಯುಕ್ತರು ಬಿಬಿಎಂಪಿ (ಎಸ್ಟೇಟ್ಸ್ ವಿಭಾಗ),ವಿನೋದ್ ಪ್ರಿಯಾ ಆರ್. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ.
ರಮೇಶ್ ಡಿ.ಎಸ್.- ನಿರ್ದೇಶಕರು,ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಶರತ್ ಬಿ – ಆಯುಕ್ತರು,ಕೃಷಿ ಇಲಾಖೆ, ಸತ್ಯಭಾಮಾ ಸಿ.-ನಿರ್ದೇಶಕರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಭಾಗ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸೋಮಶೇಖರ್ ಎಸ್.ಜೆ.- ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.