ಧಾರವಾಡ –
ಅಗ್ನಿಪಥ ವಿಚಾರದಲ್ಲಿ ದೇಶದ ಹಲವೆಡೆ ಗಲಾಟೆ ಬೆನ್ನಲ್ಲೇ ಇತ್ತ ಧಾರವಾಡ ದಲ್ಲೂ ಸೇನಾ ಅಲ್ಪಾವಧಿ ನೇಮಕಾತಿ ಯೋಜನೆಯ ‘ಅಗ್ನಿಪಥ’ ಖಂಡಿಸಿ ದಿಢೀರನೆ ಪ್ರತಿಭಟನೆ ನಡೆಯಿತು ಇನ್ನೂ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿ ಸಿದರು.
ಹೌದು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸೇರಿದ ಅಭ್ಯರ್ಥಿ ಗಳು ವಾಟ್ಸ್ ಆಪ್ ಗುಂಪುಗಳ ಮೂಲಕ ಸಂಘಟಿತರಾಗಿ ದ್ದರು.
ನಗರದ ಜಿಲ್ಲಾ ನ್ಯಾಯಾಲಯ ವೃತ್ತದ ಬಳಿ ಏಕಾಏಕಿ ಪ್ರತಿಭಟನೆಗೆ ಮುಂದಾದರು.ಪೊಲೀಸರು ಪ್ರತಿಭಟನಾಕಾ ರರನ್ನು ತಡೆದರು.ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮನವಿ ಸ್ವೀಕರಿಸಿದರು.
ಇದಕ್ಕೆ ಒಪ್ಪದ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.ಕೆಲವು ಅಭ್ಯರ್ಥಿಗಳನ್ನು ವಶಕ್ಕೆ ಪಡೆದರು.ಉಳಿದವರನ್ನು ಚದುರಿಸಿದರು.ಇನ್ನೂ ಇತ್ತ ಈ ಒಂದು ವಿಚಾರ ತಿಳಿದ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು
ಇದರಿಂದಾಗಿ ಸ್ಥಳದಲ್ಲಿ ಭಿಗುವಿನ ವಾತಾವರಣ ನಿರ್ಮಾ ಣಗೊಂಡ ಚಿತ್ರಣ ಕಂಡು ಬಂದಿತು.ಪೊಲೀಸ್ ಆಯುಕ್ತ ಲಾಭೂರಾಮ್,ಡಿಸಿಪಿ, ಇನ್ಸ್ಪೆಕ್ಟರ್ ಗಳು,ಸಿಸಿಬಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.ಸಧ್ಯ ಈ ಒಂದು ಕುರಿತು ದೂರನ್ನು ದಾಖಲು ಮಾಡಿಕೊಂಡ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ