ನವದೆಹಲಿ –
ಕೇಂದ್ರ ಸರ್ಕಾರದ ನೌಕರರಿಗೆ ವೇತನ ದಲ್ಲಿ ಹೆಚ್ಚಳ ವಾಗುವ ಗುಡ್ ನ್ಯೂಸ್ ಸಿಗುತ್ತಿದೆ ಹೌದು ಕನಿಷ್ಠ ವೇತನ ವನ್ನು 26 ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.ಹಣದುಬ್ಬರ ಏರಿಕೆ ತಕ್ಕಂತೆ ಪರಿಗಣಿಸಲಾದ ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸಿವೆ.ಪ್ರಸ್ತುತ 2.57 ರಷ್ಟು ಇರುವ ಫಿಟ್ ಮೆಂಟ್ 3.68 ಕ್ಕೆ ಹೆಚ್ಚಿಸಬೇಕೆಂದು ನೌಕರರ ಒಕ್ಕೂ ಟಗಳು ಬೇಡಿಕೆ ಇಟ್ಟಿವೆ.ಸರ್ಕಾರ ಇದನ್ನು ಒಪ್ಪಿದಲ್ಲಿ ಕನಿಷ್ಠ ವೇತನ 18 ಸಾವಿರ ರೂಪಾಯಿಯಿಂದ 26 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ.ಜುಲೈನಿಂದ ತುಟ್ಟಿಭತ್ಯೆ ಹೆಚ್ಚಳ ಜಾರಿಗೆ ಬರಲಿದ್ದು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕೂಡ ಡಿಎ ಹೆಚ್ಚಳ ಮಾಡಲಿವೆ.