ಹುಬ್ಬಳ್ಳಿ –
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಪರೇಶನ್ ಪುಟ್ ಪಾತ್ ಕಾರ್ಯಾಚರಣೆ ಕಾರ್ಯದ ಬೆನ್ನಲ್ಲೇ ಇತ್ತ ಎರಡನೇ ದೊಡ್ಡ ಮಹಾನಗರ ಪಾಲಿಕೆ ಯಾಗಿರುವ ಹುಬ್ಬಳ್ಳಿ ಧಾರವಾಡ ದಲ್ಲೂ ಅನಧಿಕೃತ ಮಳಿಗೆಗಳ ತೆರವು ಹಾಗೂ ದಂಡ ವಸೂಲಿ ಕಾರ್ಯ ಪಾಲಿಕೆಯಿಂದ ನಡೆಯುತ್ತಿದೆ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಅವರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ಅಧಿಕಾರಿಗಳು ಮಾಡ್ತಾ ಇದ್ದಾರೆ
ನಗರದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ನಿಟ್ಟಿನಲ್ಲಿ ಒತ್ತುವರಿ ಹಾಗೂ ನೈರ್ಮಲ್ಯದ ನಿಯಮಗಳನ್ನು ಉಲ್ಲಂಘಿ ಸುವವರ ವಿರುದ್ಧ ಪಾಲಿಕೆಯು ಶಿಸ್ತುಕ್ರಮ ಮುಂದುವರೆಸಿದೆ. ಆಯುಕ್ತರ ಆದೇಶ ಈ ಒಂದು ಕಾರ್ಯಾಚರಣೆ ಯನ್ನು ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ವಲಯ ಆಯುಕ್ತರ ಮಾರ್ಗದರ್ಶನದಂತೆ ಮಾಡಲಾಗುತ್ತಿದೆ ವಲಯ ಕಚೇರಿ-12ರ ವ್ಯಾಪ್ತಿಯ ಗಾಂಧಿನಗರ ಮುಖ್ಯ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಕರಾದ ಸಿದ್ಧಾರ್ಥ್ ನಡೋಣಿ, ಆರೋಗ್ಯ ನಿರೀಕ್ಷಕಿಯರಾದ ಶ್ರೀಮತಿ ನೀಲಮ್ಮ ಅಂಗಡಿ ಹಾಗೂ ಶ್ರೀಮತಿ ಪೂಜಾ ಇಚ್ಚಂಗಿ ಅವರ ನೇತೃತ್ವದ ತಂಡವು ರಸ್ತೆ ಬದಿಯಲ್ಲಿದ್ದ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಇದರ ಜೊತೆಗೆ ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಯ್ದೆಯನ್ನು ಉಲ್ಲಂಘಿಸಿದ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಒಟ್ಟು ₹3,500 ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ ಪಾದಚಾರಿ ಮಾರ್ಗ/ರಸ್ತೆ ಒತ್ತುವರಿ ಮಾಡುವುದು ಹಾಗೂ ಸ್ವಚ್ಛತೆ ಕಡೆಗಣಿ ಸುವುದು ಕಾನೂನುಬಾಹಿರವಾಗಿದ್ದು, ವ್ಯಾಪಾರಸ್ಥರು ಪಾಲಿಕೆ ಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಯಿತು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……



