ನೂತನ ಮೇಯರ್ ಉಪಮೇಯರ್ ಮೊದಲ‌ ಸಭೆ – ನೂತನ ಮೇಯರ್ ದುರ್ಗಮ್ಮ ಬಿಜವಾಡ,ಆಯುಕ್ತ ಡಾ ರುದ್ರೇಶ ಘಾಳಿ ಅವರ ನೇತ್ರತ್ವದಲ್ಲಿ ನಡೆಯಿತು ಮಹತ್ವದ ಸಭೆ ಹಲವಾರು ವಿಷಯಗಳ ಕುರಿತಂತೆ ಚರ್ಚೆ…..

Suddi Sante Desk
ನೂತನ ಮೇಯರ್ ಉಪಮೇಯರ್ ಮೊದಲ‌ ಸಭೆ – ನೂತನ ಮೇಯರ್ ದುರ್ಗಮ್ಮ ಬಿಜವಾಡ,ಆಯುಕ್ತ ಡಾ ರುದ್ರೇಶ ಘಾಳಿ ಅವರ ನೇತ್ರತ್ವದಲ್ಲಿ ನಡೆಯಿತು ಮಹತ್ವದ ಸಭೆ ಹಲವಾರು ವಿಷಯಗಳ ಕುರಿತಂತೆ ಚರ್ಚೆ…..

ಹುಬ್ಬಳ್ಳಿ

ನೂತನ ಮೇಯರ್ ಉಪಮೇಯರ್ ಮೊದಲ‌ ಸಭೆ – ನೂತನ ಮೇಯರ್ ದುರ್ಗಮ್ಮ ಬಿಜವಾಡ,ಆಯುಕ್ತ ಡಾ ರುದ್ರೇಶ ಘಾಳಿ ಅವರ ನೇತ್ರತ್ವದಲ್ಲಿ ನಡೆಯಿತು ಮಹತ್ವದ ಸಭೆ ಹಲವಾರು ವಿಷಯಗಳ ಕುರಿತಂತೆ ಚರ್ಚೆ…..

ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಶ್ರೀಮತಿ ದುರ್ಗಮ್ಮ ಬಿಜವಾಡ, ಉಪಮೇಯರ್ ಆಗಿ ಶ್ರೀಮತಿ ರತ್ನಾಬಾಯಿ ನಾಝರೆ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಪಾಲಿಕೆಗೆ ಹೊಸ ಮೇಯರ್ ಉಪಮೇಯರ್ ಆಗಮನವಾಗುತ್ತಿದ್ದೆ ಅಧಿಕಾರಿ ಗಳೊಂದಿಗೆ ಮಹತ್ವದ ಸಭೆಯನ್ನು ಮಾಡಿದರು.

ಹುಬ್ಬಳ್ಳಿಯ ಮೇಯರ್ ಕಚೇರಿಯಲ್ಲಿ ಮೇಯರ್ ದುರ್ಗಮ್ಮ ಬಿಜವಾಡ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಅವರ ನೇತ್ರತ್ವದಲ್ಲಿ ಪಾಲಿಕೆಯ ಅಧಿಕಾರಿಗಳ ಸಭೆ ನಡೆಯಿತು. ಹುಬ್ಬಳ್ಳಿಯಲ್ಲಿ ಮಹಾಪೌರಾದ ಶ್ರೀಮತಿ ದುರ್ಗಮ್ಮ ಬೀಜವಾಡ ಹಾಗೂ ಆಯುಕ್ತರಾದ ರುದ್ರೇಶ ಘಾಳಿ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಪ್ರಮುಖ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಜರುಗಿತು.

ಹುಬ್ಬಳ್ಳಿ-ಧಾರವಾಡ ನಗರಗಳ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ಮೂಲಸೌಕರ್ಯ ವಿಸ್ತರಣೆ, ನಗರಾಭಿವೃದ್ಧಿ ಕಾಮಗಾರಿಗಳು, ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ವಿಸ್ತೃತವಾಗಿ ಚರ್ಚಿಸ ಲಾಯಿತು. ಸಭೆಯಲ್ಲಿ ಪಾಲಿಕೆಯ ಅಧೀಕ್ಷಕ ಅಭಿಯಂತರರು ಹಾಗೂ ಉಪ ಆಯುಕ್ತರಾದ ವಿಜಯ್ ಕುಮಾರ್ ಆರ್, ಗವಿಸಿದ್ದಪ್ಪ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ ಕುಮಾರ್ ಯರಂಗಳ್ಳಿ , ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ,ಅರವಿಂದ ಜಮಖಂಡಿ,ಶಂಕರ ಪಾಟೀಲ್,

ಸೇರಿದಂತೆ ವಲಯ ಸಹಾಯಕ ಆಯುಕ್ತರು ಹಾಗೂ ಆರೋಗ್ಯ ಖಾತೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.ಅವಳಿ ನಗರವನ್ನು ಇನ್ನಷ್ಟು ಸುಂದರ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಜನತೆಗೆ ಅತ್ಯುತ್ತಮ ಸೇವೆ ಒದಗಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.

ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.