ಮಂಗಳೂರು –
ಹೌದು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಯಲ್ಲಿ ಮಂಗಳೂರಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ರು ಆದರೆ 10 ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ ಮಾಡಿರುವ ಮಾತುಗಳು ಕೇಳಿ ಬಂದಿದ್ದು ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.ಕರಾವಳಿ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ ಭಾರೀ ಮಳೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕೆಲ ಖಾಸಗಿ ಶಾಲೆಗಳು ರಜೆ ದಿನವೂ ಶಾಲೆ ನಡೆಸಿರುವ ಬಗ್ಗೆ ದೂರು ಬಂದಿದ್ದು ವಿದ್ಯಾರ್ಥಿ ಗಳೇ ಈ ಬಗ್ಗೆ ದೂರು ಕೊಟ್ಟಿದ್ದಾರೆ.
ರಾಜ್ಯದೆಲ್ಲೆಡೆ ತಡವಾಗಿ ಮುಂಗಾರು ಆರ್ಭಟ ಜೋರಾಗಿದ್ದು, ಕರಾವಳಿ ಜಿಲ್ಲೆಗಳ ಭಾಗಗಳಲ್ಲಿ ಹೆಚ್ಚು ಮಳೆಯಾಗ್ತಿದೆ. ಕಳೆದ ವಾರ ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ಮೂರು ದಿನ ರಜೆಗಳನ್ನ ಘೋಷಣೆ ಮಾಡಿತ್ತು. ಆದ್ರೆ ಈ ರಜೆ ದಿನದಲ್ಲೂ ಕೂಡ ತರಗತಿ ನಡೆಸಲಾಗಿದೆ ಎಂದು ದೂರು ಬಂದಿದ್ದು ಜಿಲ್ಲೆಯ ಹತ್ತಕ್ಕೂ ಅಧಿಕ ಶಾಲಾ- ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ
ದಕ್ಷಿಣ ಕನ್ನಡದಲ್ಲಿ ಮಳೆ ಜೋರಾದ ಹಿನ್ನೆಲೆ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಶಾಲಾ- ಕಾಲೇಜು ಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿದ್ದು, ಹಲವು ಕಡೆ ಶಾಲೆಗಳನ್ನು ನಡೆಸಿದೆ. ಬಳಿಕ ಮೊದಲಿಗೆ ಜಿಲ್ಲಾಡಳಿತ ಈ ಶಾಲೆ ಕಾಲೇಜುಗಳಿಗೆ ಎಚ್ಚರಿಕೆ ನೀಡಿ ರಜೆ ಘೋಷಣೆ ಮಾಡು ವಂತೆ ಸೂಚನೆ ನೀಡಿತ್ತು ನಂತರ ಎರಡನೇ ಬಾರಿ ಕೂಡ ರಜೆ ಘೋಷಣೆ ಮಾಡಿದಾಗ ಕೂಡ ಇದೇ ರೀತಿ ನಡೆದಾಗಲೂ ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸುವ ಕೆಲಸ ಮಾಡಿತ್ತು.
2 ಬಾರಿಯಷ್ಟೇ ಅಲ್ಲ ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘಿಸಿ ಕ್ಲಾಸ್ ನಡೆಸಿದೆ.ಕಠಿಣ ಕ್ರಮಕ್ಕೆ ನಿರ್ಧಾರವನ್ನು ಇದೀಗ ಮಂಗಳೂರಿನ 10ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ. ಆ ಬಳಿಕ ಇಂತಹ ಶಾಲೆ-ಕಾಲೇಜುಗಳ ಮೇಲೆ ಕ್ರಮ ಜರುಗಿಸ ಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಜಿಲ್ಲಾಡಳಿತ ರಜೆ ಘೋಷಣೆ ಮಾಡಿದ್ರೂ ಶಾಲೆ ಕಾಲೇಜುಗಳನ್ನು ನಡೆಸಿದವರ ವಿರುದ್ಧ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡೋರೋದು ವಿಶೇಷ. ದ.ಕ. ಜಿಲ್ಲಾಡಳಿತಕ್ಕೆ ದೂರವಾಣಿ ಮತ್ತು ಇತರ ಮೂಲಗಳ ಮೂಲಕ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ 10ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ನೀಡಿದೆ
ಮುಂದಿನ ದಿನಗಳಲ್ಲಿ ರಜೆ ಘೋಷಣೆ ಮಾಡಿದ್ರೂ ತರಗತಿಗ ಳನ್ನು ನಡೆಸಿದ್ರೆ ಶಾಲಾ ಪರವಾನಗಿಯನ್ನು ರದ್ದು ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವ ಚಿಂತನೆ ನಡೆಸಿದ್ದೇವೆ. ಅದರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮ, ಕಾನೂನುಗಳು ಬಹಳಷ್ಟು ಕಠಿಣವಾಗಿರುತ್ತದೆ ಎಂದು ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.
ಈ ಹಿಂದೆ ತಾಲೂಕು ಮಟ್ಟದ ರಜೆಗಳನ್ನು ರಜೆಯ ಮುಂಜಾನೆ ನಿರ್ಧಾರ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಿದ್ಧತೆ ಮಾಡಿಕೊಂಡು ಬಳಿಕ ರಜೆ ಅಂತ ತಿಳಿದು ಹೋಗುತ್ತಿರಲಿಲ್ಲ. ಈ ಬಾರಿ ಮೊದಲೇ ನಿರ್ಧಾರ ಮಾಡುವ ಕುರಿತು ಚಿಂತನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..



