ಹುಬ್ಬಳ್ಳಿ –
ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರದಿಂದ ಅನ್ಯಾಯ ಶಾಸಕ ಅರವಿಂದ ಬೆಲ್ಲದ ಪ್ರಚಾರಕ್ಕಾಗಿ ನಡೆದ ವಿಭಾಗ ಮಟ್ಟದ ಸಭೆ ಅರವಿಂದ ಬೆಲ್ಲದ ಆರೋಪ ಹೌದು ಬೆಳಗಾವಿ ಸುವರ್ಣ ಸೌಧ ದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಸಭೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಸಭೆಯಲ್ಲಿ ಉತ್ತರ ಕರ್ನಾಟಕ ಅಭಿವದ್ಧಿ ಬಗ್ಗೆ ಚರ್ಚೆ ನಡೆಸದೆ ಈ ಭಾಗದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ವತಃ ಮುಖ್ಯಮಂತ್ರಿ ವಿಭಾಗ ಮಟ್ಟದ ಸಭೆ ನಡೆಸುವುದರಿಂದ ಈ ಭಾಗದ ಜನಪ್ರತಿನಿಧಿಗಳು ಹಾಗೂ ಜನರಲ್ಲಿ ಸಾಕಷ್ಟು ನಿರೀಕ್ಷೆ ಗಳಿದ್ದವು. ಆದರೆ ಉತ್ತರದ ಜಿಲ್ಲೆಗಳ ಅಭಿವೃದ್ಧಿಗೆ ಚಕಾರ ಎತ್ತದಿರುವುದು ಬೇಸರದ ಸಂಗತಿ.

ಸಭೆಯಲ್ಲಿ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಯಾವುದೇ ಅರ್ಥಪೂರ್ಣ ಚರ್ಚೆ ನಡೆದಿಲ್ಲ. ಕೇವಲ ಬರಗಾಲದ ವಿಷಯಕ್ಕೆ ಸಭೆಯನ್ನು ಸೀಮಿತಗೊಳಿಸಿ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿದೆ.
ಬೆಂಗಳೂರಿನ ಅಭಿವೃದ್ಧಿಗೆ 1 ಲಕ್ಷದ 14 ಸಾವಿರ ಕೋಟಿ ರೂ. ಅನುದಾನ ನೀಡಿ ವಿಶೇಷ ಯೋಜನೆಗಳನ್ನು ತರಲಾಗಿದೆ. ಅದೇ ರೀತಿ ತಾರತಮ್ಯವಿಲ್ಲದೆ ಉತ್ತರ ಕರ್ನಾಟಕಕ್ಕೂ ವಿಶೇಷ ಅನುದಾನ ಸಿಗಬಹುದು ಎಂಬ ಈ ಭಾಗದ ಜನರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ಇದು ಈ ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ.
ಸುವರ್ಣ ಸೌಧದಲ್ಲಿ ನಡೆದ ಈ ಪ್ರಾದೇಶಿಕ ಸಭೆಯು ಕೇವಲ ಪ್ರಚಾರ ಮತ್ತು ತೋರಿಕೆಯ ಸಭೆಯಾಗಿದೆ ಹೊರತು, ಇದರಿಂದ ಈ ಭಾಗದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ತನ್ನ ಧೋರಣೆ ಬದಲಾಯಿಸಿ ಉತ್ತರ ಕರ್ನಾಟಕ ಭಾಗದ ಸಮಗ್ರ ಪ್ರಗತಿಗಾಗಿ 2 ಲಕ್ಷ ಕೋಟಿ ರೂ.ಗಳ ವಿಶೇಷ ಅನುದಾನ ಘೋಷಿಸಬೇಕು ಎಂದು ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..



