ಬೆಂಗಳೂರು –
ಬೆಂಗಳೂರಿನ ಖಾಸಗಿ ಶಾಲೆಯ ನರ್ಸರಿ ತರಗತಿಯಲ್ಲಿ ಐದು ವರ್ಷದ ಬಾಲಕಿಯ ಪ್ಯಾಂಟ್ ಅನ್ನು ಇತರ ಮಕ್ಕಳ ಮುಂದೆ ಎಳೆದು ಅವಮಾನ ಮಾಡಿ ಶಿಕ್ಷಿಸಿದ ಮಹಿಳಾ ಶಿಕ್ಷಕಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿ ಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.ಹಾಗಾಗಿ ಆ ಶಿಕ್ಷಕಿ ಇದೀಗ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ. ಜೊತೆಗೆ ಇದು ಶಾಲೆಗಳಲ್ಲಿ ಮಕ್ಕಳನ್ನು ದಂಡಿಸುವ,ಟೀಸ್ ಮಾಡುವ ಶಿಕ್ಷಕರಿಗೆ ಎಚ್ಚರಿಕೆ ಗಂಟೆಯಾಗಿದೆ.ಶಿಕ್ಷಕರು ಅನಗತ್ಯವಾಗಿ ಮಕ್ಕಳನ್ನು ತೀವ್ರತರನಾದ ಶಿಕ್ಷೆಗೆ ಗುರಿ ಪಡಿಸಬಾರದು ಎಂಬೊಂದನ್ನು ನ್ಯಾಯಾಲಯ ತಿಳಿಸಿದೆ
ಶಿಕ್ಷೆಯ ಅಳತೆಯಾಗಿ ಶಿಕ್ಷಕರಿಂದ ಎಳೆಯ ವಯಸ್ಸಿನಲ್ಲಿ ಯೇ ಮಕ್ಕಳನ್ನು ಆಘಾತಗೊಳಿಸುವುದು ಮಗುವಿನ ಮೇಲೆ ವಿನಾಶಕಾರಿ ಮಾನಸಿಕ ಪ್ರಭಾವವನ್ನು ಬೀರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ ನ್ಯಾಯಾಲಯವು ಐದು ವರ್ಷ ವಯಸ್ಸಿನ ಹೆಣ್ಣು ಮಗುವಿನೊಂದಿಗೆ ವ್ಯವಹರಿಸುವ ಶಿಕ್ಷಕರಿಗೆ ಕ್ಷಮಿಸಲಾಗದ ಮತ್ತು ಅನುಚಿತವಾಗಿದೆ.ಅಂತಹ ಕೃತ್ಯವನ್ನು ಪೂರ್ಣ ಪ್ರಮಾಣದ ವಿಚಾರಣೆಯಲ್ಲಿ ಅರ್ಜಿದಾರರು ಸಾಬೀತು ಪಡಿಸದ ಹೊರತು ನಿಸ್ಸಂದೇಹವಾಗಿ ಅಸಭ್ಯವಾಗಿದೆ ಎಂದು ಹೇಳಿದೆ.
ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆ ಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ಪ್ರಶ್ನಿಸಿ 41 ವರ್ಷದ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗ ಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.