ಬೆಂಗಳೂರು –
ಕರ್ನಾಟಕ ರಾಜ್ಯ ತೆರಿಗೆ ಆಯುಕ್ತರಾದ ಶ್ರೀಮತಿ ಸಿ ಶಿಖಾ ಅವರನ್ನು ಕರ್ನಾಟಕ ಬಯಲು ಸೀಮೆ ಪ್ರದೇಶದ ಅಧ್ಯಕ್ಷ ರಾದ ತವನಪ್ಪ ಅಷ್ಟಗಿ ಭೇಟಿಯಾದರು.ಹೌದು ಬೆಂಗ ಳೂರಿನ ಕಚೇರಿಯಲ್ಲಿ ಪಾಲಿಕೆಯ ಸದಸ್ಯ ನಿತೀನ್ ಇಂಡಿ ಅವರೊಂದಿಗೆ ಭೇಟಿಯಾಗಿ ಚರ್ಚೆಯನ್ನು ಮಾಡಿ ಮಾತು ಕತೆ ಮಾಡಿದರು.ತಮ್ಮ ಇಲಾಖೆ ಯೋಜನೆಗಳ ಕುರಿತಂತೆ ಹಾಗೆ ಕೆಲವೊಂದಿಷ್ಟು ಯೋಜನೆಗಳ ಕುರಿತಂತೆ ಚರ್ಚೆ ಯನ್ನು ಮಾಡಿ ಮಾಹಿತಿಯನ್ನು ಪಡೆದುಕೊಂಡರು.
ಇದೇ ವೇಳೆ ಕುಶಲೋಪರಿಯನ್ನು ವಿಚಾರಣೆ ಮಾಡಿದರು ಇನ್ನೂ ಇದೇ ವೇಳೆ ಕಚೇರಿಗೆ ಬಂದ ತವನಪ್ಪ ಅಷ್ಟಗಿ ಅವರನ್ನು ಶ್ರೀಮತಿ ಸಿ ಶಿಖಾ ಅವರು ಸ್ವಾಗತ ಮಾಡಿ ಕೊಂಡು ಅಭಿನಂದನೆಗಳನ್ನು ಸಲ್ಲಿಸಿದರು. ಈ ಒಂದು ಸಮಯದಲ್ಲಿ ಇಲಾಖೆಯಿಂದ ಮತ್ತು ವಯಕ್ತಿಕವಾಗಿ ಅಭಿವೃದ್ದಿ ವಿಚಾರದಲ್ಲಿ ಸಹಕಾರ ನೀಡೊದಾಗಿ ಭರವಸೆ ಯನ್ನು ನೀಡಿದರು.ಈ ಒಂದು ಸಮಯದಲ್ಲಿ ಪಾಲಿಕೆಯ ಸದಸ್ಯ ನಿತಿನ್ ಇಂಡಿ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.