ಧಾರವಾಡ –
ಸಾಲ ತೀರಿಸಲಾಗದೆ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ದ ನವಲಗುಂದ ಪಟ್ಟಣದಲ್ಲಿ ನಡೆದಿದೆ.ಹೌದು ಬಸವರಾಜ ಉಣಕಲ್ (48)ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ
ನಗರದ ಹೊರಹೊಲಯದಲ್ಲಿರೋ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ.2ಎಕರೆ ಜಮೀನಿನಲ್ಲಿನ 3ಲಕ್ಷ ಸಾಲ ಪಡೆದಿದ್ದ ರೈತ ಬಸವರಾಜ.ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾನಿಯಾಗಿತ್ತು ಈ ಒಂದು ಹಿನ್ನೆಲೆಯಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ.ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನದಾತ.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ಸಧ್ಯ ಈ ಕುರಿತು ದೂರು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.