ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ಆಯೋಗ ನೀಡುವ ಕುರಿತಂತೆ ಅಕ್ಟೋಬರ್ ನಲ್ಲಿ ಸಮಿತಿಯನ್ನು ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಹೇಳಿದ ಬೆನ್ನಲ್ಲೇ ಚಟುವಟಿಕೆಗಳು ಚುರುಕುಗೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಒಂದು ವಿಚಾರ ಕುರಿತಂತೆ ಸಭೆಯೊಂದನ್ನು ಕರೆದಿದ್ದಾರೆ.
ಹೌದು ಬೆಂಗಳೂರಿನಲ್ಲಿ ಈ ಕುರಿತಂತೆ ಮಾತನಾಡಿದ ಅವರು ಈಗಾಗಲೇ ಸೆಪ್ಟಂಬರ್ 6 ರಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಸಮಿತಿ ರಚನೆ ಕುರಿತಂತೆ ಘೋಷಣೆ ಮಾಡಿದ್ದು ಹೀಗಾಗಿ ಮುಂದಿನ ತಿಂಗಳು ಸಮಿತಿ ರಚನೆ ಮಾಡಬೇಕಾಗುತ್ತದೆ ಈ ಒಂದು ಹಿನ್ನಲೆಯಲ್ಲಿ ಸಮಿತಿ ಯಲ್ಲಿ ಯಾರು ಯಾರು ಇರಬೇಕು ಯಾರ ನೇತ್ರತ್ವದಲ್ಲಿ ಸಮಿತಿ ರಚನೆಯಾಗಬೇಕು ಈ ಎಲ್ಲಾ ವಿಚಾರಗಳ ಕುರಿ ತಂತೆ ಸಮಿತಿಗೆ ಅಂತಿಮ ರೂಪರೇಷೆಯನ್ನು ನೀಡುವ ಉದ್ದೇಶದಿಂದ ಚರ್ಚೆಯನ್ನು ಮಾಡಲು ಉನ್ನತ ಮಟ್ಟ ದಲ್ಲಿ ಅಧಿಕಾರಿಗಳ ಮತ್ತು ಒಂದಿಬ್ಬರು ಸಚಿವರ ನೇತ್ರತ್ವ ದಲ್ಲಿ ಸಭೆಯನ್ನು ಮುಖ್ಯಮಂತ್ರಿ ಯವರು ಕರೆದಿದ್ದಾರೆ.
ಬೆಂಗಳೂರಿನಲ್ಲಿ ಈ ಒಂದು ಸಭೆ ನಡೆಯಲಿದ್ದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು ಮುಖ್ಯಮಾಗಿ ಈ ಒಂದು ಸಭೆಯಲ್ಲಿ ಸಮಿತಿಗೆ ಅಧ್ಯಕ್ಷರ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರ ನೇಮಕ ಕುರಿತಂತೆ ಮತ್ತು ವರದಿ ನೀಡುವ ಕುರಿತಂತೆ ಚರ್ಚೆಯನ್ನು ಮಾಡಲಿದ್ದಾರೆ.
ಸಧ್ಯ ನಾಲ್ಕೈದು ಚುನಾವಣೆಗಳು ಬರಲಿದ್ದು ಹೀಗಾಗಿ ವಿನಾಕಾ ರಣ ವಿಳಂಬವಾಗದೇ ಕೂಡಲೇ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಸೂಚನೆಯನ್ನು ನೀಡಲಿದ್ದಾರೆ. ಇನ್ನೂ ಈಗಾಗಲೇ ತುಂಬಾ ವಿಳಂಬವಾಗಿದ್ದು ಹೀಗಾಗಿ ಸಮಿತಿ ರಚನೆ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯ ಮಂತ್ರಿ ಕಾರ್ಯಪ್ರವೃತ್ತರಾಗಿ ಸಧ್ಯ ಸಮಿತಿ ರಚನೆ ಕುರಿತಂತೆ ಸಧ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಅನುಮಾನಗೊಂಡಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿಯವರ ಈ ಒಂದು ಮತ್ತೊಂದು ಹಂತದ ಸಭೆ ಹೊಸ ಭರವಸೆಯೊಂ ದಿಗೆ ಆಶಾಕಿರಣವ ನ್ನುಂಟು ಮಾಡಿದ್ದು
ಸಮಿತಿ ಯಾರ ನೇತ್ರತ್ವದಲ್ಲಿ ರಚನೆ ಯಾಗುತ್ತದೆ ಯಾರು ಯಾರು ಸದಸ್ಯರಾಗುತ್ತಾರೆ ಎಂಬ ಕುರಿತಂತೆ ಕುತೂಹಲ ಮೂಡಿದೆ.