ನವದೆಹಲಿ –
ನವರಾತ್ರಿಗೂ ಮುನ್ನವೇ ಸರ್ಕಾರ ನೌಕರರ ತುಟ್ಟಿಭತ್ಯೆ ಯನ್ನು ಶೇ.3ರಷ್ಟು ಹೆಚ್ಚಿಸಿದೆ.ನೌಕರರು ಡಿಎ ಹೆಚ್ಚಳಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು.ಹಬ್ಬದ ಮುನ್ನ ಒಡಿಶಾ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ವನ್ನು ಪ್ರಕಟಿಸಿದೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾ ಯಕ್ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.ಸರ್ಕಾರ ಹೊರಡಿ ಸಿರುವ ಹೊಸ ಅಧಿಸೂಚನೆ ಪ್ರಕಾರ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ಹೌದು ನೌಕರರ ತುಟ್ಟಿ ಭತ್ಯೆಯನ್ನು ಈಗಿರುವ ಶೇ.31 ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಹೆಚ್ಚಿದ ತುಟ್ಟಿಭತ್ಯೆಯನ್ನು ಜನವರಿ 1, 2022 ರಿಂದ ಅನ್ವ ಯಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ.ಅಂದರೆ ಇದರೊಂದಿಗೆ ನೌಕರರಿಗೆ 8 ತಿಂಗಳ ಬಾಕಿಯೂ ಸಿಗಲಿದೆ. ಒಡಿಶಾ ಸರ್ಕಾರದ ಈ ನಿರ್ಧಾರದಿಂದ 4 ಲಕ್ಷ ಉದ್ಯೋ ಗಿಗಳು ಮತ್ತು 3.5 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ವಾಗಲಿದೆ.ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಜನವರಿ ಯಿಂದ ಆಗಸ್ಟ್‌ವರೆಗಿನ ತುಟ್ಟಿಭತ್ಯೆಯ ಬಾಕಿಯನ್ನು ನೌಕರರಿಗೆ ಪ್ರತ್ಯೇಕವಾಗಿ ನೀಡುವುದಾಗಿ ತಿಳಿಸಿತ್ತು
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಕೂಡ ಪ್ರಸ್ತುತ ಶೇ.34 ರಷ್ಟಿರುವುದು ಗಮನಿಸಬೇಕಾದ ಅಂಶ.ಅಂದರೆ ಈಗ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ತುಟ್ಟಿಭತ್ಯೆಯ ಲಾಭ ರಾಜ್ಯ ಸರ್ಕಾರಿ ನೌಕರರಿಗೂ ಸಿಗಲಿದೆ.
ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಬಹುದು ಎಂಬುದು ಗಮನಿಸಬೇ ಕಾದ ಸಂಗತಿ.ವಾಸ್ತವವಾಗಿ ಉದ್ಯೋಗಿಗಳ ತುಟ್ಟಿ ಭತ್ಯೆಯು AICPI ಯ ಡೇಟಾವನ್ನು ಅವಲಂಬಿಸಿರುತ್ತದೆ. ಎಐಸಿಪಿಐ ದತ್ತಾಂಶದ ಆಧಾರದ ಮೇಲೆ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.ಆದರೆ ಇನ್ನೂ ಘೋಷಣೆ ಮಾಡಿಲ್ಲ.


























