ಬೆಂಗಳೂರು –
ಈಗಾಗಲೇ ನಿಗದಿ ಮಾಡಿದಂತೆ ನಾಳೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2022-23ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮುಂಚಿತವಾಗಿ ಈ ಒಂದು ಕಾರ್ಯಕ್ರಮವನ್ನು ನಡೆಸಲು ದಿನಾಂಕವನ್ನು ಕೂಡಾ ಶಿಕ್ಷಣ ಇಲಾಖೆ ನಿಗದಿ ಪಡಿಸಿತ್ತು.ಅದರಂತೆ ನಾಳೆ ಪ್ರಾಥಮಿಕ ಶಾಲೆಗಳಲ್ಲಿ, ನಾಡಿದ್ದು ಪ್ರೌಢ ಶಾಲೆಗಳಲ್ಲಿ ಆಯೋಜಿಸಲು ಸೂಚಿಸಿತ್ತು ಆದರೇ ಇದೀಗ ಈ ಕಾರ್ಯಕ್ರಮವನ್ನು ದಿಢೀರ್ ಮುಂದೂಡಿಕೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ
ಅಲ್ಲದೇ ಮರು ದಿನಾಂಕವನ್ನು ಕೂಡಾ ನಿಗದಿ ಮಾಡಿದೆ.ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಕ್ರಮವಾಗಿ ದಿನಾಂಕ 29-10-2022 ಮತ್ತು 31-10-2022ರಂದು ನಿಗದಿ ಪಡಿಸಿ, ಆದೇಶಿಸಲಾಗಿತ್ತು ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ಸಂಕಲನಾತ್ಮಕ ಮೌಲ್ಯ ಮಾಪನ-1(ಎಸ್‌ಎ-1) ಕಾರ್ಯಚಟುವಟಿಕೆ ಯನ್ನು ಮುಂದೂಡಲಾಗಿದ್ದು ಶಾಲಾ ವಿದ್ಯಾರ್ಥಿ ಗಳ ಕಲಿಕಾ ಪ್ರಗತಿಯ ವಿಶ್ಲೇಷಣಾ ವರದಿ ಪ್ರಸ್ತುತ ಅಲಭ್ಯವಾಗುವುದರಿಂದ ಅದರ ಆಧಾರದ ಮೇಲೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಿನಾಂಕ 29-10-2022 ಮತ್ತು 31-10-2022ರಂದು ಕೈಗೊಳ್ಳಬೇಕಾಗಿ ರುವ 2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ದಿನಾಂಕ 28-11-2022 ಮತ್ತು ಎಲ್ಲಾ ಪ್ರೌಢಶಾಲೆಗಳಲ್ಲಿ ದಿನಾಂಕ 30-11-2022ರಂದು ನಿರ್ವಹಿಸಲು ಸೂಚಿಸಲಾಗಿದೆ.
ಇನ್ನೂ ಶಿಕ್ಷಣ ಇಲಾಖೆಯಿಂದ ಮರು ನಿಗದಿ ಪಡಿಸಿರುವಂತ ದಿನಾಂಕದಂತೆ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ.