ಮಧುಗಿರಿ –
ಶಿಕ್ಷಕ ಅಮಾನತು ಅಮಾನತು ಮಾಡಿ ಆದೇಶ ಮಾಡಿದ DDPI ಹೌದು ಜಾತಿ ನಿಂದನೆ, ದುರ್ನಡತೆ ಹಾಗೂ ಕರ್ತವ್ಯ ಲೋಪದ ಹಿನ್ನೆಲೆ ಯಲ್ಲಿ ಸಹ ಶಿಕ್ಷಕರೊಬ್ಬರನ್ನು ಡಿಡಿಪಿಐ ಕೆ.ಜಿ. ರಂಗಯ್ಯ ಸೇವೆಯಿಂದ ಅಮಾನತುಗೊಳಿ ಸಿದ್ದಾರೆ .ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲ್ಲೂಕಿನ ಪದ್ಮಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕ ಕೆ.ಸಿ.ಜೀವನ್ ಅಮಾನತುಗೊಂಡವರಾಗಿದ್ದಾರೆ
ಪರಿಶಿಷ್ಟ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿದ್ದರು ಜೊತೆಗೆ ಆ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಸಹ ಶಿಕ್ಷಕರೊಬ್ಬರ ಜೊತೆ ಮೊಬೈಲ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ಈ ಸಂಭಾಷಣೆಯನ್ನು ವಾಟ್ಸ್ ಆಪ್ ಮೂಲಕ ಹರಿಯ ಬಿಟ್ಟು ಆ ಸಮುದಾಯಕ್ಕೆ ಮಾನಹಾನಿ ಮಾಡಿದ್ದರು ಈ ಬಗ್ಗೆ ಶಿರಾ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾ ಗಿತ್ತು.
ಈ ಶಿಕ್ಷಕರ ಬೇಜವಾಬ್ದಾರಿತನ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯ ವರ್ತನೆ ಯಿಂದ ಸಾರ್ವಜನಿಕ ಆರೋಪಕ್ಕೆ ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.
ಚಕ್ರವರ್ತಿ ಹಿರಿಯ ವರದಿಗಾರರು ಸುದ್ದಿ ಸಂತೆ ನ್ಯೂಸ್