ಸಿಂದಗಿ –
ಮುಖ್ಯಶಿಕ್ಷಕರೊಬ್ಬರು ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ದಲ್ಲಿ ನಡೆದಿದೆ.ಬಸವರಾಜ ಮಲ್ಲಪ್ಪ ನಾಯಕಲ್ ಮೃತ ಮುಖ್ಯಶಿಕ್ಷಕರಾದವರಾಗಿದ್ದಾರೆ. ವಿಜಯ ಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ
ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್(54) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮ ಹತ್ಯೆ ಮಾಡಿಕೊಂಡಿರುವ ಮುಖ್ಯ ಶಿಕ್ಷಕನ ಅಂಗಿಯ ಜೇಬಿನಲ್ಲಿ ಡೆತ್ ನೋಟ್ ದೊರೆತಿದ್ದು ಅದರಲ್ಲಿ ಸಿಂದಗಿ ಬಿಇಓ ಎಚ್.ಎಂ.ಹರನಾಳ, ಸಿಆರ್‌ಪಿ ಜಿ.ಎನ್.ಪಾಟೀಲ್, ಬಿ.ಎಂ.ತಳವಾರ, ಎಸ್.ಎಲ್.ಭಜಂತ್ರಿ ಹಾಗೂ ಗ್ರಾಮದ ಸಂಗಮೇಶ ಚಿಂಚೋಳಿ ಇವರ ಕಿರುಕುಳ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರು ವುದಾಗಿ ಬರೆದಿದ್ದಾರೆ.
ಎಸ್ ಎಲ್ ಭಜಂತ್ರಿ ಅವರ ಮುಖ್ಯಶಿಕ್ಷಕ ಹುದ್ದೆಯ ಜವಾಬ್ದಾರಿಯನ್ನು ನನಗೆ ಕೊಟ್ಟು ಬಳಿಕ ನನ್ನನ್ನು ಬಲಿಪಶು ಮಾಡಲು ಹೊಂಚು ಹಾಕಿದ್ದರು ಈ ಬಗ್ಗೆ ಸಿಂದಗಿ ಬಿಇಓ ಎಚ್ ಎಂ ಹರಿನಾಳ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಅವರು ನನಗೆ ಪದೇ ಪದೇ ನೊಟಿಸ್ ಕೊಟ್ಟು ಕಿರುಕುಳ ನೀಡುತ್ತಿ ದ್ದರು ಗ್ರಾಮದ ಸಂಗಮೇಶ್ ಚಿಂಚೋಳಿಯಿಂದ ಅಲಿಗೆಷನ್ ಮಾಡಿ ಸಿಆರ್ ಪಿ ಹಾಗೂ ಸಂಗ ಮೇಶ್ ನನ್ನಿಂದ ಹಣ ಪಡೆದಿದ್ದರು ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖ ಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ದೂರು ನೀಡಿದ್ದರು
ಆದರೆ ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಆಗಿದೆ ನನ್ನ ಪತ್ನಿ ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಈ ಸಂಭಂಧ ಮೃತ ಶಿಕ್ಷಕ ಬಸವರಾಜ ಮಲ್ಲಪ್ಪ ನಾಯಕಲ್ ಅವರ ಪತ್ನಿ ನೀಡಿದ ದೂರಿನ ಅನ್ವಯ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತಂತೆ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳ ಬೇಕಾಗಿದ್ದು ಆರೋಪಿಗಳ ಬಂಧನ ವಿಳಂಬ ವಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಸಿಂದಗಿ…..