ಕಾರವಾರ –
ಆಟವಾಡುತ್ತಾ ಬಾವಿಗೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಕಾರವಾರ ದಲ್ಲಿ ನಡೆದಿದೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹರಿದೇವ ನಗರದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು 3 ವರ್ಷದ ಮಗು ಮೃತಪಟ್ಟಿದೆ
ಸ್ಥುಥಿ (3) ಮೃತಪಟ್ಟ ಮಗುವಾಗಿದೆ.ಮನೆಯ ಬಳಿ ಆಟವಾಡುತ್ತಿದ್ದ ಸ್ಥುಥಿ, ಗಣಪತಿ ಮೂರ್ತಿ ಎಂದು ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ.ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.
ಇತ್ತ ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದೆ ಇದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ ಆದರೆ ಎಲ್ಲಿ ಹುಡುಕಿದರೂ ಕಾಣಿಸಲಿಲ್ಲ. ಬಡಾವಣೆಯ ನಿವಾಸಿಗಳೆಲ್ಲ ಹುಡುಕಾಡುವಾಗ ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಸುದ್ದಿ ಸಂತೆ ನ್ಯೂಸ್ ಕಾರವಾರ…..