ಗದಗ –
ಲೋಕಾಯುಕ್ತ ಬಲೆಗೆ ಬಿದ್ದ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ – ಒಂದೂವರೆ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ ಲೋಕಾ ಅಧಿಕಾರಿಗಳು
ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೊರೈಸಿದ ಬಿಲ್ ಕ್ಲೀಯರ್ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದ ಶಿಶು ಅಭಿವೃದ್ದಿ ಯೋಜನಾ ಮಹಿಳಾ ಅಧಿಕಾರಿಯೊಬ್ಬರು ಲೋಕಾಯಕ್ತ ಬಲೆಗೆ ಬಿದ್ದ ಘಟನೆ ಗದಗ ನಲ್ಲಿ ನಡೆದಿದೆ.ಹೌದು ಅಂಗನ ವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದವರಿಗೆ ಬಿಲ್ ಪಾವತಿಸಲು ₹1.50 ಲಕ್ಷ ಪಡೆದ ಆರೋಪದ ಮೇಲೆ ರೋಣ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಬಸಮ್ಮ ಹೂಲಿ ಮತ್ತು ಸಿಬ್ಬಂದಿ ಜಗದೀಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಬಂಧಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದ್ದ ಅನಿಲ್ ಕುಮಾರ್ ದಡ್ಡಿ ಎಂಬುವರಿಗೆ ₹42 ಲಕ್ಷ ಬಿಲ್ ಪಾವತಿಸಲು ಸಿಡಿಪಿಒ ಬಸಮ್ಮ ಹೂಲಿ ₹1.60 ಲಕ್ಷ (ಶೇ 4) ನೀಡುವಂತೆ ಬೇಡಿಕೆ ಇಟ್ಟಿ ದ್ದರು ಈ ಒಂದು ವಿಚಾರ ಕುರಿತಂತೆ ಅನಿಲ್ ಕುಮಾರ್ ಲೋಕಾಯುಕ್ತರಿಗೆ ದೂರನ್ನು ನೀಡಿ ದ್ದರು.ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಲೋಕಾ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.ಇನ್ನೂ ಇತ್ತ ಜಗದೀಶ್ ಬಳಿ ನೀಡಲು ಮಹಿಳಾ ಅಧಿಕಾರಿ ಸೂಚಿಸಿದ್ದರು.
ಅನಿಲ್ ಕುಮಾರ ಗಜೇಂದ್ರಗಡದ ಬಳಿಯಿರುವ ಡಾಬಾದಲ್ಲಿ ಜಗದೀಶ್‌ಗೆ ₹1.50 ಲಕ್ಷ ನೀಡು ವಾಗ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಿ ದ್ದಾರೆ.ಈ ಕುರಿತಂತೆ ಪ್ರಕರಣವನ್ನು ದಾಖಲಿಸಿ ಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರ ಣೆಯಲ್ಲಿ ಸಿಪಿಐ ರವಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಗದಗ…..