ಹುಬ್ಬಳ್ಳಿ –
ರಾಜ್ಯಮಟ್ಟದಲ್ಲಿ ಆಡಿಸಿ ರಾಷ್ಟ್ರಮಟ್ಟಕ್ಕೆ ಯುವ ಪ್ರತಿಭೆಯನ್ನು ಕೈಬಿಟ್ಟ ಕ್ರಿಕೇಟ್ ಆಯ್ಕೆ ಸಮಿತಿ – ಪ್ರಭಾವಕ್ಕೆ ಮಣಿದು ಶ್ರೇಯಾ ಕುಂಬಾರನ್ನು ಕೈಬಿಟ್ಟ ಸಮಿತಿ ಕಣ್ಣೀರಾಕುತ್ತಿರುವ ಧಾರವಾಡ ಜಿಲ್ಲೆಯ ಯುವ ಪ್ರತಿಭಾನ್ವಿತ ಕ್ರಿಕೇಟ್ ಪಟು
ರಾಷ್ಟ್ರಮಟ್ಟದಲ್ಲಿ ಕ್ರಿಕೇಟ್ ಆಟವಾಡಲು ರಾಜ್ಯದ 17 ವರ್ಷದ ಒಳಗಿನ ಬಾಲಕಿಯರ ಕ್ರಿಕೇಟ್ ಟೀಮ್ ಸಿದ್ದವಾಗಿದೆ.ಆಯ್ಕೆಗೊಂಡ ಈ ಒಂದು ಟೀಮ್ ಗೆ ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ ಲಾಡ್ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭವನ್ನು ಹಾರೈಸಿದರು.ಇದೆಲ್ಲಾ ಸಂತೋಷದ ವಿಚಾರ ಇದು ಒಂದು ವಿಚಾರವಾದರೆ ಇನ್ನೂ ರಾಜ್ಯವನ್ನು ಪ್ರತಿನಿಧಿಸುವ ಈ ಒಂದು ತಂಡ ವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯವರು ದೊಡ್ಡದಾದ ಎಡವಟ್ಟೊಂದನ್ನು ಮಾಡಿದ್ದಾರೆ.
ಹೌದು ಧಾರವಾಡ ಜಿಲ್ಲೆಯಿಂದ ಉತ್ತಮವಾಗಿ ಆಡಿ ಬೆಳಗಾವಿ ವಿಭಾಗದಲ್ಲೂ ಕೂಡಾ ಚನ್ನಾಗಿ ಆಡಿ ಮೈಸೂರು ವಿಭಾಗದಲ್ಲೂ ಕೂಡಾ ಅದ್ಬುತ ವಾಗಿ ಆಟವಾಡಿ ರಾಜ್ಯಮಟಕ್ಕೆ ಆಯ್ಕೆಯಾಗಿ ದ್ದರು ಶ್ರೇಯಾ ಕುಂಬಾರ. ಶ್ರೇಯಾ ಕುಂಬಾರ ಹುಬ್ಬಳ್ಳಿಯ ಎನ್ ಕೆ ಠಕ್ಕರ್ ಹೆಸ್ಕೂಲ್ ನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು ಓದಿನ ಜೊತೆ ಯಲ್ಲಿ ತಂದೆ ಸಾಮಾನ್ಯ ಪೊಲೀಸ್ ಪೇದೆಯಾ ಗಿದ್ದರೂ ಕೂಡಾ ತಂದೆ ತಾಯಿ ಯರ ಪ್ರೋತ್ಸಾಹ ದಿಂದಾಗಿ ಶ್ರೇಯಾ ಕುಂಬಾರ ಅದ್ಬುತ ಬ್ಯಾಟ್ಸ್ ಮನ್ ಮತ್ತು ಕೀಪರ್ ಆಗಿದ್ದು ಆಡಿದ ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಿದ್ದಾರೆ.
ಯಾವುದರಲ್ಲೂ ಫೇಲ್ ಆಗದ ಶ್ರೇಯಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ ನಮ್ಮ ಮಗಳು ಆಯ್ಕೆಯಾಗುತ್ತಾಳೆ ಎಂದುಕೊಂಡಿದ್ದ ವರಿಗೆ ಆಯ್ಕೆ ಸಮಿತಿ ದೊಡ್ಡ ಶಾಕ್ ನೀಡಿದೆ. ಜಿಲ್ಲಾ,ವಿಭಾಗ,ರಾಜ್ಯ ಮಟ್ಟದಲ್ಲಿ ಅದ್ಭುತವಾಗಿ ಆಟವಾಡಿದ್ದ ಶ್ರೇಯಾ ಕುಂಬಾರನ್ನು ಸಧ್ಯ ರಾಷ್ಟ್ರ ಮಟ್ಟಕ್ಕೆ ಕೈಬಿಡಲಾಗಿದೆ.ಕೆಲವರ ಪ್ರಭಾವಕ್ಕೆ ಮಣಿದು ಆಯ್ಕೆ ಸಮಿತಿಯವರು ಸಧ್ಯ ಶ್ರೇಯಾ ಳನ್ನು ತಂಡದಿಂದ ಕೈಬಿಟ್ಟಿದ್ದಾರೆ.
ರಾಜ್ಯಮಟ್ಟದಲ್ಲಿ ಧಾರವಾಡ ಜಿಲ್ಲೆಯ ಹೆಸರನ್ನು ಮಿಂಚಿಸಿದ್ದ ಶ್ರೇಯಾ ಕುಂಬಾರನ್ನು ಸಧ್ಯ ಕೈಬಿಟ್ಟ ಕಾರಣ ಏನು ಎಂಬೊದನ್ನು ಯಾರು ಹೇಳುತ್ತಿಲ್ಲ. ಧಾರವಾಡ ಜಿಲ್ಲೆಯ ಯುವ ಕ್ರೀಡಾಪ್ರತಿಭೆಯಾ ಗಿದ್ದ ಇವಳನ್ನು ರಾಷ್ಟ್ರಮಟ್ಟಕ್ಕೆ ಕೈಬಿಟ್ಟಿದ್ದು ಬೇಸರದ ಸಂಗತಿಯಾಗಿದೆ.ಧಾರವಾಡ ಜಿಲ್ಲೆಯ ಕ್ರೀಡಾ ಪ್ರತಿಭೆಯನ್ನು ಆಯ್ಕೆ ಸಮಿತಿಯವರು ಕಡೆಗಣಿಸಿದ್ರಾ ಕಾರಣ ಏನು ಯಾರ ಒತ್ತಡಕ್ಕೆ ಮಣಿದು ಕೈಬಿಟ್ಟಿದ್ದಾರೆ
ಈ ಎಲ್ಲಾ ಪ್ರಶ್ನೆಗಳನ್ನು ಮುಂದೆ ಇಟ್ಟುಕೊಂಡು ಶ್ರೇಯಾಳ ಪೋಷಕರು ಮುಖ್ಯಮಂತ್ರಿಗೆ ರಾಜ್ಯಪಾಲರಿಗೆ ಕ್ರೀಡಾ ಸಚಿವರಿಗೆ ಪತ್ರವನ್ನು ಬರೆಯಲು ಸಿದ್ದತೆಯನ್ನು ನಡೆಸಿದ್ದಾರೆ.ಕಾಂಗ್ರೇಸ್ ಪಕ್ಷದ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ಆಯ್ಕೆ ಸಮಿತಿಯವರು ಈ ಒಂದು ಕೆಲಸವನ್ನು ಮಾಡಿದ್ದಾರೆ ಎಂಬ ಮಾತುಗಳು ಹುಬ್ಬಳ್ಳಿಯ ಕ್ರಿಕೇಟ್ ಮೈದಾನದಲ್ಲಿ ಕೇಳಿ ಬರುತ್ತಿದ್ದು ಪ್ರಭಾವಕ್ಕೆ ಮಣಿದು ಯುವ ಪ್ರತಿಭೆಯನ್ನು ಕೈಬಿಟ್ಟಿದ್ದಕ್ಕೆ ಸಧ್ಯ ಶ್ರೇಯಾ ಕೂಡಾ ಕಣ್ಣೀರಾಕು ತ್ತಿದ್ದಾಳೆ
17 ವರ್ಷಗ ಒಳಗಿನ ಬಾಲಕಿಯರ ಕ್ರಿಕೇಟ್ ಪಂದ್ಯಾವಳಿಗೆ ಈಗಾಗಲೇ ರಾಜ್ಯದಿಂದ ತಂಡ ವನ್ನು ಪೈನಲ್ ಮಾಡಲಾಗಿದ್ದು ಈ ಒಂದು ಅಂತಿಮವಾದ ತಂಡದಿಂದ ಶ್ರೇಯಾಳಿಗೆ ಅವಕಾಶವನ್ನು ನೀಡಲಾಗಿಲ್ಲ ಹೀಗಾಗಿ ಈ ಒಂದು ವಿಚಾರವನ್ನು ಬಾಲಕಿಯ ಪೋಷಕರು ತುಂಬಾ ಗಂಭೀರವಾಗಿ ತಗೆದುಕೊಂಡಿದ್ದು ಪತ್ರಗಳನ್ನು ಬರೆದು ಕೆಲವರಿಗೆ ಮನವಿಗಳನ್ನು ನೀಡಲು ಮುಂದಾಗಿದ್ದಾರೆ.ಬಿಹಾರ ದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಟವಾಡಲು ರಾಜ್ಯದಿಂದ ಟೀಮ್ ತೆರಳಲಿದ್ದು ಈಗಾಗಲೇ ಆಡಿದ ಎಲ್ಲಾ ಪಂದ್ಯಗಳ ಲ್ಲೂ ಉತ್ತಮವಾಗಿ ಆಟವಾಡಿದ ಶ್ರೇಯಾ ಕೈ ಬಿಟ್ಟಿದ್ದಕ್ಕೆ ಬೇಸರಗೊಂಡಿದ್ದಾಳೆ.
ಸಧ್ಯ ರಾಜ್ಯ ಮಟ್ಟದ ಟೀಮ್ ನಲ್ಲಿ ಮೈಸೂರು ನಿಂದ 5,ಧಾರವಾಡ ದಿಂದ 2 ಮತ್ತು ಬೆಳಗಾವಿ ಯಿಂದ 9 ಬಾಲಕಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ಆಟವಾಡಿದ ನಾಲ್ಕು ಬಾಲಕಿಯನ್ನು ಕೈಬಿಟ್ಟಿದ್ದಾರೆ.ಇನ್ನಾದರೂ ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗ ಣಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೆ ಯುವ ಕ್ರೀಡಾ ಪ್ರತಿಭೆಯಾಗಿರುವ ಶ್ರೇಯಾ ಕುಂಬಾರ ಗೆ ಅವಕಾಶವನ್ನು ನೀಡಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಹೆಸರನ್ನು ಮಿಂಚಿಸಿ ರುವ ಇವಳಿಗೆ ರಾಷ್ಟ್ರಮಟ್ಟದಲ್ಲೂ ಒಂದು ಅವಕಾಶ ನೀಡಿ ಪ್ರಬಾವಕ್ಕೆ ಮಣಿದಿರುವ ಆಯ್ಕೆ ಸಮಿತಿಯವರಿಗೆ ಕಾರಣವನ್ನು ಕೇಳಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..