ಬೆಳಗಾವಿ –
ಹಾಡುಹಗಲೇ ಸೈನಿಕನ ಮೇಲೆ ಪುಂಡಾಡಿಕೆ ಮೆರೆದ ಪುಂಡರ ಗುಂಪು ಹೌದು ಬೆಳಗಾವಿಯ ಬಾರೊಂದರ ಎದುರು ಹಾಡುಹಗಲೇ ಪುಂಡರ ಗುಂಪೊಂದು ಪುಂಡಾಟಿಕೆ ಮೆರೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಕ್ಯಾಂಪ ಪೋಲೀಸ ಠಾಣಾ ವ್ಯಾಪ್ತಿಯ ಗಣೇಶಪುರದ ಬಾರ್ ಒಂದರ ಮುಂದೆ ನಡೆದ ಗಲಾಟೆಯಲ್ಲಿ ಯೋಧನೊಬ್ಬ ನಿಗೆ ನಡು ರಸ್ತೆಯಲ್ಲಿಯೇ ಐದಾರು ಜನರ ತಂಡ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಹಾರಾಷ್ಟ್ರದ ಚಂದಗಡದ ಪರಶುರಾಮ ಪಾಟೀಲ್ ಎಂದು ಗುರುತಿಸಲಾಗಿದೆ.ಇಂತಹ ಒಂದು ಅಮಾನವೀ ಯ ಘಟನೆ ನಡೆದ ಸ್ಥಳಕ್ಕೆ ಕ್ಯಾಂಪ ಠಾಣೆಯ ಪೋಲೀಸರು ಬಂದರೂ ದೂರು ದಾಖಲು ಮಾಡಿಕೊಂಡಿಲ್ವಂತೆ.
ಯೋಧರಿಗೆ ಹಿಂಗಾದರೆ ಇನ್ನೂ ಸಾಮಾನ್ಯರ ಗತಿಯೇನು ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..