ಇಂಡಿ –
ಸರ್ಕಾರಿ ಶಾಲೆಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾದರಿಯಾದ ಸಾಪ್ಟವೇರ್ ಪ್ರೀತಿ ನಂದೀಶ್ ಮಂಟೂರ – ಗ್ರಾಮೀಣ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದವರಿಗೆ ಶಾಲೆಯಲ್ಲಿ ನಡೆಯಿತು ಗೌರವ ಸನ್ಮಾನ…..ಧನ್ಯವಾದ ಹೇಳಿದ ಶಾಲೆಯ ಮುಖ್ಯಶಿಕ್ಷಕ ಆನಂದ ಕೆಂಬಾವಿ ನೇತ್ರತ್ವದಲ್ಲಿನ ಶಾಲಾ ಬಳಗ.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯೊಂದಕ್ಕೆ ಸಾಪ್ಟವೇರ್ ಇಂಜನಿಯರ್ ರೊಬ್ಬರು 1 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾರೆ. ಹೌದು ಇಂಡಿ ತಾಲ್ಲೂಕಿನ ಹಿರೇಮಸಳಿ ಶಾಲೆ ಯಲ್ಲಿ ಈ ಹಿಂದೆ ಕಲಿತ ಪ್ರೀತಿ ನಂದೀಶ್ ಮಂಟೂರ ಸಧ್ಯ ಲಂಡನ್ ನಲ್ಲಿ ಸಾಪ್ಟವೇರ್ ಇಂಜನಿಯರ್ ಆಗಿದ್ದಾರೆ.
ತಾಂಬಾ ಗ್ರಾಮದ ಪ್ರಕಾಶ ಹತ್ತಿ ಹಾಗೂ ಅನ್ನಪೂರ್ಣ ಹತ್ತಿಯವರ ಪುತ್ರಿಯಾಗಿದ್ದಾರೆ ಪ್ರೀತಿ ನಂದೀಶ್ ಮಂಟೂರ್. ಆರಂಭದಲ್ಲಿ ಗ್ರಾಮದ ಈ ಒಂದು ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ನಂತರ ಸಂಪೂರ್ಣ ವಿದ್ಯಾಭ್ಯಾಸವನ್ನು ವಿಜಯಪೂರದಲ್ಲಿ ಮುಗಿಸಿ ದರು.ಇಂಜಿನಿಯರಿಂಗ್ ಪದವಿಯನ್ನು ಪಡೆದು ಸಧ್ಯ ಲಂಡನ್ ನಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿದ್ದಾರೆ.
ತುಂಬಾ ಸರಳ ಸಹೃದಯಿ ವ್ಯಕ್ತಿತ್ವವನ್ನು ಹೊಂದಿದ ಪ್ರೀತಿ ಮಂಟೂರ್ ಅವರು ಸರಕಾರಿ ಶಾಲೆಯ ಮೇಲಿನ ಅಭಿಮಾನದಿಂದ ಶಾಲೆಯಲ್ಲಿ ಕಲಿಯದಿದ್ದರೂ ಕೂಡಾ ಇಂಡಿ ತಾಲೂಕಿನ ಲ್ಲಿಯೇ 650 ಮಕ್ಕಳ ಸಂಖ್ಯೆ ಹೊಂದಿರುವ ಅತಿ ದೊಡ್ಡ ಮಾದರಿ ಶಾಲೆಯಾದ ಪ್ರಯುಕ್ತ ಸ್ವಇಚ್ಛೆ ಯಿಂದ ದೇಣಿಗೆಯನ್ನು ಕೊಡುವಾದಾಗಿ ಶಾಲೆಯ ಮುಖ್ಯಶಿಕ್ಷಕ ಆನಂದ ಕೆಂಬಾವಿಯ ವರಿಗೆ ಫೋನ್ ಕರೆ ಮೂಲಕ ತಿಳಿಸಿದ್ದಾರೆ.
ವಿಜ್ಞಾನ ಪ್ರಯೋಗಾಲಯದ ಸಲಕರಣೆಗಳನ್ನು ಇಟ್ಟುಕೊಳ್ಳಲು ಪಿಠೋಪಕರಣದ ಅವಶ್ಯಕತೆ ಇದೆ ಎಂದು ಹೇಳಿದ ತಕ್ಷಮ ಒಂದು ಲಕ್ಷ ದೇಣಿಗೆಯನ್ನು ನೀಡಿದ್ದಾರೆ.ಫರ್ನಿಚರ್ ಮಾಡಿಸಲು ಹಣದ ಸಹಾಯ ಮಾಡಿದ್ದಾರೆ ಇನ್ನೂ 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿಜ್ಞಾನ ಪ್ರಯೋಗಾಲಯದ ಕೋಣೆಯನ್ನು ಉದ್ಘಾಟನೆ ಮಾಡಿಸಲಾಯಿತು.
ಸರ್ಕಾರಿ ಶಾಲೆಯ ಮಕ್ಕಳು ಮನಸು ಮಾಡಿದರೆ ಏನು ಬೇಕಾದ್ದು ಆಗಬಹುದು ಎಂದು ಸರ್ಕಾರಿ ಶಾಲೆಯ ಕುರಿತು ತುಂಬಾ ಅಭಿಮಾನವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆ ಶಾಲೆ ಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಆರ್ ಬಿ ಸೌದಾಗರ ಇವರಿಗೆ ಹಾಗೂ HPS ತೆನಿಹಳ್ಳಿ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿದ ಅಂಬಣ್ಣ ಸುಣಗಾರ ಇವರಿಗೂ ಶಾಲೆಯಿಂದ ಸಿಂದಗಿ ತಾಲೂಕಿನ ಗಣಿಹಾರ ಶಾಲೆಗೆ ವರ್ಗಾವಣೆ ಗೊಂಡ ಚಿತ್ರಕಲಾ ಶಿಕ್ಷಕರಾದ ಪ್ರಕಾಶ್ ಹೋಳಿನ್ ಇವರಿಗೂ ಸನ್ಮಾನ ಮಾಡಿ ಗೌರವಿಸಲಾಯಿತು.
ಹಿರೇಮಸಳಿ ಶಾಲೆಗೆ ದೊಡ್ಡ ಮೊತ್ತದ ದೇಣಿಗೆ ಯನ್ನು ನೀಡಿದ ಪ್ರೀತಿ ನಂದೀಶ್ ಮಂಟೂರ್ ಅವರಿಗೆ ಆ ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಅವರಿಗೆ ಅಭಿನಂದನೆ ಸಲ್ಲಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಾಲೆ ಯಲ್ಲಿ ನಡೆಯುವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿ ತುಂಬಾ ಸಂತೋಷ ವ್ಯಕ್ತಪಡಿಸಿದರು.
ಈ ಒಂದು ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಆನಂದ ಕೆಂಬಾವಿ,ಬಿ ಕೆ ಪಟ್ಟಣಶೆಟ್ಟಿ,ಪಿ ಆರ್ ಪಾಂಡ್ರೆ,ಸಂಗಮೇಶ ಡಿಸಿ,ಡಿ ಜಿ ಅಡಳ್ಳಿ,ದುಂಡಪ್ಪ ಹರಿಜನ,ಬಾಳು ಚೌಹಾನ ಮಹಾದೇವಿ ಗಿನ್ನಿ,ಆರ್ ಆರ್ ಬಡಿಗೇರ,ಡಿ ಜೆ ಮಾದನಕಟ್ಟಿ,ಆರ್ ಟಿ ತಳವಾರ,ಚಂದ್ರಕಲಾ ಬೇಡಗೆ,
ಪ್ರತಿಭಾ ಗಬ್ಬಸಾವಳಗಿ,ಪ್ರೇಮಾ ಯರನಾಳ, ಸೇರಿದಂತೆ ಶಾಲೆಯ ಅತಿಥಿ ಶಿಕ್ಷಕರಾದ ರಫೀಕ್ ಗೌರ್,ಹೆಚ್ ಆರ್ ನಾಟಿಕರ್,ಶೆಂಕ್ರೆಮ್ಮ ತಳವಾರ,ಶಾರದಾ ಮುಗಳಿ,ಕೀರ್ತಿ ಗುನ್ನಾಪೂರ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಉಪಸ್ಥಿತ ರಿದ್ದರು.
ಸುದ್ದಿ ಸಂತೆ ನ್ಯೂಸ್ ಇಂಡಿ…..