This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ವಿಜಯಪುರ

ರಜೆಯಲ್ಲೂ ಸರ್ಕಾರಿ ಶಾಲೆಯಲ್ಲಿ ನಡೆಯಿತು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ – ಶ್ರಮದಾನದ ಮೂಲಕ ಶಾಲಾ ಆವರಣದಲ್ಲಿ ಸ್ವಚ್ಚತಾ ಕಾರ್ಯ ಮಾಡಿ ಮಾದರಿಯಾದ ರೇವನೂರು ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು…..

WhatsApp Group Join Now
Telegram Group Join Now

ಜೇವರ್ಗಿ

ರಜೆಯಲ್ಲೂ ಸರ್ಕಾರಿ ಶಾಲೆಯಲ್ಲಿ ನಡೆಯಿತು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ – ಶ್ರಮದಾ ನದ ಮೂಲಕ ಶಾಲಾ ಆವರಣದಲ್ಲಿ ಸ್ವಚ್ಚತಾ ಕಾರ್ಯ ಮಾಡಿ ಮಾದರಿಯಾದ ರೇವನೂರು ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು.

ಸಾಮಾನ್ಯವಾಗಿ ರಜೆ ಸಿಕ್ಕರೆ ಪ್ರತಿಯೊಬ್ಬರು ಆ ಕೆಲಸ ಈ ಕೆಲಸ ಎನ್ನುತ್ತಾ ಬ್ಯೂಜಿಯಾಗುತ್ತಾರೆ ಇತ್ತ ರಜೆಯಲ್ಲೂ ಕೂಡಾ ಶಿಕ್ಷಕರು ಶಾಲೆಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.ಹೌದು ಜೇವರ್ಗಿ ತಾಲ್ಲೂಕಿನ ರೇವನೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಜೆಯಲ್ಲೂ ಕೂಡಾ ಶ್ರಮದಾನ ವನ್ನು ಮಾಡಲಾಯಿತು.

ಸ್ವಚ್ಛತಾ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಶಾಲೆಯ ಮುಖ್ಯೋಪಾಧ್ಯರು ಶಿಕ್ಷಕರು ವಿದ್ಯಾರ್ಥಿಗಳು ಎಸ್ ಡಿಎಮ್ ಸಿ ಟೀಮ್ ಸೇರಿದಂತೆ ಎಲ್ಲರೂ ಈ ಒಂದು ಸ್ವಚ್ಚತಾ ಶ್ರಮದಾನದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಶಾಲಾ ಆವರಣ ಶಾಲೆಯನ್ನು ಸ್ವಚ್ಚತೆ ಮಾಡಿದರು

ಇದರೊಂದಿಗೆ ವಿಶೇಷವಾಗಿ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿ ಯೊಬ್ಬರು ಕೂಡಾ ಕೈಯಲ್ಲೊಂದು ಜಾಡೂವನ್ನು ಹಿಡಿದುಕೊಂಡು ಶಾಲಾ ಆವರಣ ಮತ್ತು ಶಾಲೆ ಕೋಠಡಿಗಳನ್ನು ಕ್ಲೀನ್ ಮಾಡಿ ನಮ್ಮ ಶಾಲೆ ನಮ್ಮ ಆಸ್ತಿ ನಮ್ಮ ಶಾಲೆ ನಮ್ಮ ಸೌಂದರ್ಯ್ಯ ಎಂಬ ಮಾತುಗಳಿಗೆ ಪ್ರೇರಣೆಯನ್ನು ನೀಡಿ ಇತರ ರಿಗೆ ಮಾದರಿಯಾದರು.ಎರಡು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದರು.

ಈ ಒಂದು ಸಂದರ್ಭದಲ್ಲಿ ಶಾಲೆಯ ಮುಖ್ಯೋ ಪಾಧ್ಯರಾದ ಅರುಣಾಬಾಯಿ ಕಟಗಿ,ಶಿಕ್ಷಕ ಸಿಬ್ಬಂದಿಗಳಾದ ದಾಸಯ್ಯ ಗುತ್ತೇದಾರ, ಬಸವ ರಾಜ ಪತ್ತಾರ,ರಾಚಮ್ಮ,ಅಂಬಿಕಾ,ಎಸ್ ಡಿಎಮ್ ಸಿ ಅಧ್ಯಕ್ಷರು ಮತ್ತು ಶಾಲಾ ಮಕ್ಕಳು ಗ್ರಾಮದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಜೇವರ್ಗಿ…..


Google News

 

 

WhatsApp Group Join Now
Telegram Group Join Now
Suddi Sante Desk