ಹುಬ್ಬಳ್ಳಿ –
ನವಲೂರಿನಿಂದ ಸತ್ತೂರಿನ ಬಿಆರ್ ಟಿಎಸ್ ಬಸ್ ಕಾರಿಡಾರ್ ವರೆಗೆ ಮತ್ತೆ ಬಸ್ ಸಂಚಾರವನ್ನು ಆರಂಭ ಮಾಡಲಾಗಿದೆ. ಈ ಹಿಂದೆ ಆರಂಭ ಮಾಡಿ ಕರೋನಾ ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಈ ಒಂದು ಬಸ್ ಸಂಚಾರವನ್ನು ಮತ್ತೆ ಆರಂಭ ಮಾಡಲಾಗಿದೆ.
ಪ್ರಯಾಣಿಕರ ಹೆಚ್ಚಳ ಮತ್ತು ಸಾರ್ವಜನಿಕರ ಒತ್ತಡದಿಂದಾಗಿ ಈ ಒಂದು ಬಸ್ ಸಂಚಾರ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಬೆಳಿಗ್ಗೆ 6 40 ರಿಂದ ರಾತ್ರಿ 9 30 ರ ವರೆಗೆ ಬಸ್ ಸಂಚಾರ ಇರಲಿದೆ ಎಂದರು.
ನವಲೂರು ಗ್ರಾಮದಿಂದ ಬಸ್ ಕಾರಿಡಾರ್ ವರೆಗೆ ಇಲ್ಲಿಂದ ನವಲೂರು ಗ್ರಾಮದವರೆಗೆ ಬಸ್ ಸಂಚಾರ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಪ್ರಮುಖವಾಗಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಈ ಒಂದು ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.