ಕಟ್ಟೆಚ್ಚರದ ನಡುವೆ ‘FDA’ ಪರೀಕ್ಷೆ – ಪರೀಕ್ಷೆಯಲ್ಲಿಯೇ ಸಾಮೂಹಿಕ ನಕಲು ಒರ್ವನ ಬಂಧನ ಮುಂದುವರಿದ ವಿಚಾರಣೆ

Suddi Sante Desk

ಬೆಂಗಳೂರು ‌-

ಇಂದು ರಾಜ್ಯಾದ್ಯಂತ ನಡೆದ ಪ್ರಥಮ ದರ್ಜೆ ಸಹಾಯಕ(ಎಫ್ ಡಿಎ) ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಕಲು ನಡೆದಿರುವ ಆರೋಪಗಳು ಕೇಳಿ ಬಂದಿವೆ.ವಿಜಯಪುರದ ನಗರದ ಎಸ್.ಎಸ್.ಹೈಸ್ಕೂಲ್ ನಲ್ಲಿ ನಡೆದ ಪರೀಕ್ಷೆ ವೇಳೆ ಬ್ಲಾಕ್ ನಂ16ರ ಕೀ ಉತ್ತರವನ್ನು ಹೈಸ್ಕೂಲ್ ಸಿಬ್ಬಂದಿ ಯೊಬ್ಬರು ನೀಡಿರುವ ವಿಷಯವನ್ನು ವಿದ್ಯಾರ್ಥಿ ಗಳು ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಅಭ್ಯರ್ಥಿಯೊಬ್ಬರಿಗೆ ಕೀ ಆನ್ಸರ್ ನೀಡಿದ್ದಾರೆ‌ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಎರಡನೇ ಪರೀಕ್ಷೆ ಸುಸೂತ್ರವಾಗಿ ನಡೆಯಿತಾದರೂ ಈ ರೀತಿ ವಿದ್ಯಾರ್ಥಿಗೆ ಕೀ ಉತ್ತರ ನೀಡಿ ಉಳಿದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದರು.

ಮೊದಲು ಪರೀಕ್ಷೆ ಮುಗಿಯುವ ಮುನ್ನ ಕೀ ಉತ್ತರ ಪರಿಕ್ಷಾರ್ಥಿಗೆ ತಲುಪಿರುವ ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಪರಿಶೀಲನೆ ನಡೆಸಿದರು. ಈ‌ ಕುರಿತು ಪ್ರತಿಕ್ರಿಯೆ ನೀಡಿದ ಅವರು ಘಟನೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಕಾಲೇಜ್ ಸಿಬ್ಬಂದಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆ ನಂತರ ನಡೆದ ಘಟನೆ ಸತ್ಯಾಂಶ ಹೊರಬೀಳ ಲಿದೆ ಎಂದು ತಿಳಿಸಿದ್ದಾರೆ.ಈ ಹಿಂದೆ ಎಫ್ ಡಿಎ ಪರೀಕ್ಷೆ ಆಯೋಜಿಸಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿ ಪರೀಕ್ಷೆ ಮುಂದೂಡಲಾಗಿತ್ತು. ಇಂದು ನಡೆದ ಪರೀಕ್ಷೆ ವೇಳೆಯೂ ಸಹ ಕೀ ಉತ್ತರ ನೀಡಿದ ಆರೋಪ ಕೇಳಿ ಬಂದಿದೆ. ಕೆಪಿಎಸ್ ಸಿ ಸೂಕ್ತ ತನಿಖೆ ನಡೆಸಬೇಕಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.