ಧರ್ಮೇಂದ್ರ ಪ್ರಧಾನ ರಾಜಿನಾಮೆ ಸತ್ಯಕ್ಕೆ ಸಂದ ಜಯ ಶಾಸಕ ಪ್ರಸಾದ್ ಅಬ್ಬಯ್ಯ – ಬಿಜೆಪಿಯ ಅಹಂಕಾರಕ್ಕೆ ತಕ್ಕ ಪಾಠ ಎಂದ ಸ್ಲಂ ಬೋರ್ಡ್ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ…..

Suddi Sante Desk
ಧರ್ಮೇಂದ್ರ ಪ್ರಧಾನ ರಾಜಿನಾಮೆ ಸತ್ಯಕ್ಕೆ ಸಂದ ಜಯ ಶಾಸಕ ಪ್ರಸಾದ್ ಅಬ್ಬಯ್ಯ – ಬಿಜೆಪಿಯ ಅಹಂಕಾರಕ್ಕೆ ತಕ್ಕ ಪಾಠ ಎಂದ ಸ್ಲಂ ಬೋರ್ಡ್ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ…..

ಹುಬ್ಬಳ್ಳಿ

ಧರ್ಮೇಂದ್ರ ಪ್ರಧಾನ ರಾಜಿನಾಮೆ ಸತ್ಯಕ್ಕೆ ಸಂದ ಜಯ ಎಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪತ್ರಿಕಾ ಪ್ರಕಟಣೆ ಯ ಮೂಲಕ ಹೇಳಿಕೆ ನೀಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸತ್ಯಕ್ಕೆ ಸಿಕ್ಕ ಜಯ ಮತ್ತು ಬಿಜೆಪಿಯ ಅಹಂಕಾರಕ್ಕೆ ತಕ್ಕ ಪಾಠ ಎಂದು ಸ್ಲಂ ಬೋರ್ಡ್ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು

ಅವರು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವಿದ್ಯಾರ್ಥಿಗಳ ಶಕ್ತಿ ಬಿಜೆಪಿಗೆ ಬಿಸಿ ಮುಟ್ಟಿಸಿದೆ. ವಿದ್ಯಾರ್ಥಿಗಳಿಗೆ ಬೆಂಬಲವಾಗಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಪರ ನಿಂತು ಸಂಸತ್ ನಲ್ಲಿ ಹಾಗೂ ಬೀದಿಯಲ್ಲಿ ವಿದ್ಯಾರ್ಥಿಗಳ ಪರ ಗಟ್ಟಿಯಾಗಿ ಧ್ವನಿ ಎತ್ತಿದೆ.

ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಹಾಗೂ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ 23 ದಿನಗಳಿಂದ ಹಲವಾರು ಜನ ಜಂತರ್ ಮಂತರ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು ಇದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕ್ಯಾರೆ ಎಂದಿರಲಿಲ್ಲ  ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕೆಲ ವೊಂದಿಷ್ಟು ಮುಖ್ಯ ವಾಹಿನಿಗಳಲ್ಲಿ ವಿದ್ಯಾರ್ಥಿ ಸಮೂಹವನ್ನು ಆತಂಕವಾದಿಗಳು ಉಗ್ರವಾಗಿಗಳು ದೇಶದ್ರೋಹಿಗಳು ಎಂಬು ವಂಂತೆ ಬಿಂಬಿಸಿದ್ದರು. ಅವರಿಗೆ ವಿದ್ಯಾರ್ಥಿ ಸಮೂಹ ಸರಿ ಯಾಗಿ ಪಾಠ ಕಲಿಸಿದೆ ಎಂದು ಶಾಸಕರು ಹೇಳಿದರು

ಬಿಜೆಪಿ ಸರ್ಕಾರವನ್ನು ಯಾರಾದರೂ ಪ್ರಶ್ನೆ ಮಾಡಿದರೆ ದೇಶ ದ್ರೋಹಿಗಳು ಎಂಬ ಹಣೆ ಪಟ್ಟ ಕಟ್ಟುತ್ತಾರೆ‌ ಭಾರತ ದೇಶದ ಜನ ಬಿಜೆಪಿಯಿಂದ ದೇಶಭಕ್ತಿಯ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕೇ ಎಂದು ಶಾಸಕರು ಪ್ರಶ್ನಿಸಿದ್ದಾರೆ.ಇವರಿಗೆ ನಾಚಿಕೆ ಇದ್ದರೆ ತಕ್ಷಣವೇ ಅಮಿತ್ ಶಾ ಕೂಡ ರಾಜೀನಾಮೆ ನೀಡಬೇಕು ಅಲ್ಲಿ ಸೇರಿದಂತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಮಾರಣಾಂತಿ ಕವಾಗಿ ಹಲ್ಲೆ ಮಾಡಲಾಗಿದೆ.

 

ಇದಕ್ಕೆ ಗೃಹ ಸಚಿವರು ಹೊಣೆ ಹೊತ್ತು ಕೊಳ್ಳಬೇಕು ಎಂದು ಶಾಸಕರು ಅಗ್ರಹಿಸಿದ್ದಾರೆ.ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ ಯುವಕರ ಒಗ್ಗಟ್ಟಿನ ಹೋರಾಟದ ದೊಡ್ಡ ಗೆಲುವು ಇದಾಗಿದ್ದು ನಮ್ಮ ಪಕ್ಷ ಸದಾ ವಿದ್ಯಾರ್ಥಿಗಳ , ರೈತರ ಪರವಾಗಿ ನಿಲ್ಲುತ್ತದೆ ಕೇಂದ್ರದ ಬಿಜೆಪಿ ಸರ್ಕಾರ ಈ ದೇಶದಿಂದ ತೊಲಗಬೇಕಾಗಿದೆ ಜನರು ಇವರ ಆಡಳಿತವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಮುಂದಿನ ದಿನದಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕರು ಹೇಳಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.