ಕರ್ತವ್ಯ ಲೋಪ ಹಿನ್ನಲೆ BEO ಅಮಾನತು – ಹಲವು ಆರೋಪ ಗಳ ಹಿನ್ನಲೆಯಲ್ಲಿ ಶಿಕ್ಷೆ…..

Suddi Sante Desk

ಉಡುಪಿ –

ಕರ್ತವ್ಯ ಲೋಪ ಹಿನ್ನಲೆಯಲ್ಲಿ ಉಡುಪಿ ಬಿಇಒ ಮಂಜುಳಾ ಕೆ. ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.ಇವರ ವಿರುದ್ದ ಹಲವಾರು ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮವನ್ನು ಇಲಾಖೆ ಕೈಗೊಂಡಿದೆ.ಪ್ರಸ್ತುತ ಮಂಜುಳಾ ಕೆ ಇವರನ್ನು ಡಯಟ್ ಮಂಗಳೂರು ಇಲ್ಲಿಗೆ ವರ್ಗ ಮಾಡಲಾಗಿದೆ.ಇವರ ಕಚೇರಿಯ ಕರ್ತವ್ಯ ನಿರ್ವಹಣೆ ಅತಿಥಿ ಶಿಕ್ಷಕರ ನಿಯೋಜನೆ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮ ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ತನಿಖಾ ಸಮಿತಿ ರಚನೆ ಮಾಡಿ ಸದರಿ ಸಮಿತಿ ಸಲ್ಲಿಸಿರುವ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೂಲ ಶಾಲೆಯಿಂದ ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಿ ಆ ಹುದ್ದೆಗಳಿಗೆ ಅತಿಥಿ ಶಿಕ್ಷಕ ರನ್ನು ನಿಯಮಗಳಿಗೆ ವಿರುದ್ಧವಾಗಿ ನೇಮಕಾತಿ ಮಾಡಿರುವುದು ಸೇರಿದಂತೆ ಇನ್ನಿತರ ಆರೊಪಗಳು ಇವರ ವಿರುದ್ದ ಕೇಳಿ ಬಂದಿದ್ದವು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.