SIR ತೀವ್ರಗೊಳಿಸಲು ಸ್ವತಃ ಅಖಾಡಕ್ಕಿಳಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ – ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುತ್ತಾ SIR ಕಾರ್ಯ ಯಶಸ್ಸಿಗೆ ಪಣತೊಟ್ಟ ಡಾ ರುದ್ರೇಶ ಘಾಳಿ…..

Suddi Sante Desk
SIR ತೀವ್ರಗೊಳಿಸಲು ಸ್ವತಃ ಅಖಾಡಕ್ಕಿಳಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ –  ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುತ್ತಾ SIR ಕಾರ್ಯ ಯಶಸ್ಸಿಗೆ ಪಣತೊಟ್ಟ ಡಾ ರುದ್ರೇಶ ಘಾಳಿ…..

ಹುಬ್ಬಳ್ಳಿ ಧಾರವಾಡ

ರಾಜ್ಯದಲ್ಲಿ ಸಧ್ಯ SIR ಕಾರ್ಯ ಜೋರಾಗಿ ನಡೆಯುತ್ತಿದ್ದು ಇತ್ತ ರಾಜ್ಯದಲ್ಲಿಯೇ ಎರಡನೇ ದೊಡ್ಡ ಮಹಾನಗರ ಪಾಲಿಕೆ ಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೂಡಾ ಈ ಒಂದು SIR ಕಾರ್ಯ ಜೋರಾಗಿ ನಡೆಯುತ್ತಿದೆ ಈಗಾಗಲೇ ಪ್ರತಿಶತ 60 ರಷ್ಟು ಕಾರ್ಯ ಮುಕ್ತಾಯ ವಾಗಿದೆ

ಇನ್ನೂ ಇತ್ತ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆಯು ಇದೀಗ ಭರದಿಂದ ಸಾಗುತ್ತಿದೆ ಈ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುವ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (HDMC) ಆಯುಕ್ತರು ಸ್ವತಃ ಅಖಾಡಕ್ಕಿಳಿದು ಜನಸ್ನೇಹಿ ಆಡಳಿತಕ್ಕೆ ಅತ್ಯುತ್ತಮ ನಿದರ್ಶನ ಒದಗಿಸಿದ್ದಾರೆ.

ಆಯುಕ್ತರೇ ಖುದ್ದಾಗಿ ಜನರ ಮನೆ ಬಾಗಿಲಿಗೆ ತೆರಳಿ ಎನ್ಯುಮ ರೇಷನ್ ಫಾರ್ಮ್‌ಗಳನ್ನು ವಿತರಿಸುತ್ತಿರುವುದು ಮಾತ್ರವಲ್ಲದೆ, ಆ ಫಾರ್ಮ್‌ಗಳನ್ನು ಯಾವುದೇ ಗೊಂದಲವಿಲ್ಲದೆ ಅತ್ಯಂತ ನಿಖರ ವಾಗಿ ಭರ್ತಿ ಮಾಡುವುದು ಹೇಗೆ ಎಂಬುದರ ಕುರಿತು ಸಾರ್ವಜನಿಕರಿಗೆ ಸರಳವಾಗಿ ವಿವರಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಹಿರಿಯ ಅಧಿಕಾರಿಗಳೇ ನೇರವಾಗಿ ಜನರ ಬಳಿ ಬಂದು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಪಾಲಿಕೆಯ ಪಾರದರ್ಶಕ ಹಾಗೂ ಬದ್ಧತೆಯ ಕಾರ್ಯವೈಖರಿಗೆ ಹಿಡಿದ ಕೈ ಕನ್ನಡಿಯಾಗಿದ್ದು ಇದರೊಂದಿಗೆ ಪ್ರಕ್ರಿಯೆ ಮತ್ತಷ್ಟು ಚುರುಕು ಗೊಂಡಿದೆ.

ಒಂದು ಕಡೆ ಸಿಬ್ಬಂದಿ ಗಳು ಇವರೊಂದಿಗೆ ಪಾಲಿಕೆಯ ಆಯುಕ್ತರು ಕೂಡಾ ಗಲ್ಲಿ ಗಲ್ಲಿ ತಿರುಗುತ್ತಾ ಈ ಒಂದು ಮಹತ್ವದ ಕಾರ್ಯದಲ್ಲಿ ತೊಡಗಿದ್ದನ್ನು ನೋಡಿದರೆ ನಿಜವಾಗಿಯೂ ಆಯುಕ್ತರ ಜನ ಸ್ನೇಹಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದ

 

ಅಲಿ ಕುಂದಗೋಳ ಜೊತೆ ಪ್ರಮೋದ್ ಕಪಲಿ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.