ಧಾರವಾಡ –
ಸಾಮಾನ್ಯವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ಅಂದರೆ ಅಂದ ಚಂದವಾಗಿ ಬಟ್ಟೆಗಳನ್ನು ಹಾಕಿಕೊಂಡು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹೇಳಿ ನಂತರ ಒಂದಿಷ್ಟು ಪೊಟೊ ಗಳನ್ನು ತಗೆಸಿಕೊಂಡರೆ ಮುಗಿತು.ಆದರೆ ಇವೆಲ್ಲದರ ನಡುವೆ ಧಾರವಾಡದ ಗುಳೇದಕೊಪ್ಪ ಸರ್ಕಾರಿ ಶಾಲೆ ವಿಶೇಷವಾದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

ಹೌದು ಈಗಾಗಲೇ ಎರಡು ವರುಷಗಳ ಹಿಂದೆ ಈ ಒಂದು ಶಾಲೆಯ ಹೆಸರಿನಲ್ಲಿ ಧಾರವಾಡದ M R ಜಾಧವ್ ಮತ್ತು ಕುಟುಂಬದವರು 50 ಸಾವಿರ ರೂಪಾಯಿ ದತ್ತಿ ಇಟ್ಟಿದ್ದಾರೆ.ಪ್ರತಿ ವರುಷ ಈ ಒಂದು ಹಣದಿಂದ ಬರುವ ಬಡ್ಡಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಲಾಗುತ್ತದೆ. ಗಣರಾಜ್ಯೋತ್ಸವದ ದಿನದಂದು ಈ ಒಂದು ಕಾರ್ಯವನ್ನು ಜಾಧವ್ ಪರಿವಾರದವರು ಮಾಡಿದ್ದು ಸಧ್ಯ ಇವರ ಪ್ರೇರಣೆಯಿಂದ ಇದೇ ಸರ್ಕಾರಿ ಶಾಲೆಗೆ ಇಬ್ಬರು ದತ್ತಿ ಹಣ ಇಟ್ಟಿದ್ದಾರೆ.

ಹೌದು ಓಂ ಸಾಯಿ ಇನ್ಪಾಸ್ಚಚ್ಚರ್ ಸಂಸ್ಥೆಯ ಬಸವರಾಜ ಪಾಟೀಲ ಅವರು ತಾಯಿಯ ಹೆಸರಿನಲ್ಲಿ 11 ಸಾವಿರ ಅನ್ನು ದತ್ತಿ ಇಟ್ಟಿದ್ದಾರೆ. ಇಂದು ಶಾಲೆಯಲ್ಲಿ ಈ ಒಂದು ಕಾರ್ಯವನ್ನು ಮಾಡಿದರು.

ಇವರೊಂದಿಗೆ ಇದೇ ಮೊದಲ ಬಾರಿಗೆ ಗುಳೇದಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಗುರುಪಾದ ನಾಗಪ್ಪ ಅಪ್ಪನ್ನವರ ಕೂಡಾ 10 ಸಾವಿರ ರೂಪಾಯಿ ದತ್ತಿ ಇಟ್ಟರು.

ಜಾಧವ್ ಪರಿವಾರದವರನ್ನು ನೋಡಿ ಈಗ ಇಬ್ಬರು ಇದೇ ಶಾಲೆಯನ್ನು ದತ್ತಿ ತಗೆದುಕೊಂಡಿದ್ದಾರೆ. ಇನ್ನೂ ಇದೇ ವೇಳೆ ಮನೋಜ್ ಸಂಗೊಳ್ಳಿ ಅವರು ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ದಾನವಾಗಿ ನೀಡಿದರು.

ಇನ್ನೂ ಹೀಗೆ ಗಣರಾಜ್ಯೋತ್ಸವ ದಿನದಂದು ವಿಭಿನ್ನವಾಗಿ ಕಾರ್ಯ ಮಾಡಿ ಅರ್ಥ ಪೂರ್ಣ ವಾಗಿ ಆಚರಣೆ ಮಾಡಿ ಮಾದರಿಯಾದರು.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಶಿವಾಜಿ ರಾಮಚಂದ್ರ ಜಾಧವ್,M R ಜಾಧವ,Sdmc ಅಧ್ಯಕ್ಷ ರುದ್ರಪ್ಪ ವಾಲಿಕಾರ್,ಮನೋಜ್ ಸಂಗೊಳ್ಳಿ,

ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ಗ್ರಾಮ ಪಂಚಾಯತಿ ಮಾಜಿ ಹಾಲಿ ಸದಸ್ಯರು