ಮಕ್ಕಳೊಂದಿಗೆ ಆಟವಾಡಬೇಡಿ SSLC PUC ಪರೀಕ್ಷೆ ರದ್ದು ಮಾಡಿ ವಾಟಾಳ್ ನಾಗರಾಜ್ ಆಗ್ರಹ…..

Suddi Sante Desk

ಚಾಮರಾಜನಗರ –

ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಹೆಚ್ಚಳ ವಾಗುತ್ತಿರುವುದರಿಂದ ಕೆಲ ರಾಜ್ಯಗಳಲ್ಲಿ ಈಗಾಗಲೇ 10 ಹಾಗೂ12 ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಲಾಗಿದೆ.ಇನ್ನು ಕರ್ನಾಟಕದಲ್ಲೂ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳ ಚರ್ಚೆಗಳು ನಡೆದಿವೆ. ಎಸ್‌ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಈ ವರ್ಷ ಪರೀಕ್ಷೆ ಬೇಡ ಹಾಗೆ ಯೇ ಅವರನ್ನ ಪಾಸ್ ಮಾಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ಒತ್ತಾಯಿಸಿ ದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಆಟವಾಡ ಬೇಡಿ ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸಿದರು

ಎಲ್ಲಾ ರಾಜ್ಯಗಳಲ್ಲಿ ಎಸ್‌ಎಸ್‌ಎಲ್ ವಿದ್ಯಾರ್ಥಿಗ ಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ದಾರೆ ನಿಮಗೆ ಹೇಳ್ತೀನಿ ಈ ವಿಚಾರದಲ್ಲಿ ಚಾಲೆಂಜ್ ತೆಗೆದುಕೊಳ್ಳ ಬೇಡಿ ಎಂದರು.

ಯಾವ ಕಾರಣಕ್ಕೂ ನೀವು ಮಕ್ಕಳಿಂದ ಪರೀಕ್ಷೆ ಬರೆಸಲು ಆಗಲ್ಲ ಒಂದು ತಿಂಗಳು ಪಾಠವೇ ಆಗಿಲ್ಲ. ಆದ್ದರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳನ್ನ ಪಾಸ್ ಮಾಡಲೇಬೇಕು ಎಂದು ಆಗ್ರಹಿಸಿ ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.