ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡದಲ್ಲಿ ACB ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ 5 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪಾಸ್ತಿ ಮಾಡಿದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳ ಟೀಮ್ ಹುಬ್ಬಳ್ಳಿ ಧಾರವಾಡದಲ್ಲಿ ಐದು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಕಲ್ಮೇಶ ಶಿಗ್ಗಾವಿ ಇವರು ಹುಬ್ಬಳ್ಳಿಯಿಂದ ವರ್ಗಾವಣೆಯಾಗಿದ್ದು ಇನ್ನೂ ಇವರಿಗೆ ಹುದ್ದೆಯನ್ನು ತೊರಿಸಿಲ್ಲ ಇವರ ಮನೆಯ ಮೇಲೆ ಧಾರವಾಡದ ACB ಅಧಿಕಾರಿಗಳ 3 ಟೀಮ್ ದಾಳಿ ಮಾಡಿದೆ. ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ದಾಳಿಯನ್ನು ಮಾಡಲಾಗಿದೆ.

ಹುಬ್ಬಳ್ಳಿಯ ಒಂದು ಕಡೆ ಮತ್ತು ಧಾರವಾಡದ ಎರಡು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಇನ್ನೂ ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳು ಸೂರ್ಯ ಉದಯಿಸುವ ಮುನ್ನವೇ ಭ್ರಷ್ಟ ಅಧಿಕಾರಿಗಳ ಮನೆಯ ಬಾಗಿಲು ಬಡಿದು ಪರಿಶೀಲನೆ ಮಾಡತಾ ಇದ್ದಾರೆ.

ಇನ್ನೂ ಹಾವೇರಿಯ ಮತ್ತು ದಾವಣಗೆರೆ ಎಸಿಬಿ ಅಧಿಕಾರಿಗಳ ಎರಡು ತಂಡ ಎರಡು ಕಡೆಗಳಲ್ಲಿ ದಾವಣಗೆರೆಯಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಅವರ ಮನೆಯ ಎರಡು ಕಡೆಗಳಲ್ಲಿ ಅಧಿಕಾರಿಗಳು ಶೋಧ ಮಾಡತಾ ಇದ್ದಾರೆ.

ಒಟ್ಟಾರೆ ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡ ದಲ್ಲಿ ಐದು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡತಾ ಇದ್ದಾರೆ.ಮುಂದುವರಿದಿದೆ ಕಾರ್ಯಾಚರಣೆ ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ಮಾಡತಾ ಇದ್ದಾರೆ