ಶಿಕ್ಷಕಿ ಗೆ ಪಂಗನಾಮ ಹಾಕಿದ ವಂಚಕರು – 1 ಕೋಟಿ ರೂಪಾಯಿ ಕೊಡುವ ಆಮಿಷ ನೀಡಿ ವಂಚನೆ

Suddi Sante Desk

ಬೆಂಗಳೂರು –

Olx ನಲ್ಲಿ ಶಿಕ್ಷಕಿ ಯೊಬ್ಬರಿಗೆ ಒಂದು ಲಕ್ಷ ರೂಪಾ ಯಿ ರೂಪಾಯಿ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌.ಹೌದು 1947ರ ಇಸವಿ 1 ರೂ.ನಾಣ್ಯ ಮಾರಾಟಕ್ಕಿಟ್ಟ ಶಿಕ್ಷಕಿಗೆ ಸೈಬರ್ ವಂಚಕ ರು 1 ಕೋಟಿ ರೂ.ಗೆ ಖರೀದಿ ಮಾಡುವ ನೆಪದಲ್ಲಿ 1 ಲಕ್ಷ ರೂ ಪಡೆದು ವಂಚನೆ ಮಾಡಿದ್ದಾರೆ.ಸರ್ಜಾಪುರ ರಸ್ತೆಯಲ್ಲಿನ ವಿಪ್ರೋ ಗೇಟ್ ನಲ್ಲಿ ನೆಲೆಸಿರುವ 38 ವರ್ಷದ ಶಿಕ್ಷಕಿ ವಂಚನೆಗೆ ಒಳಗಾದವರಾಗಿದ್ದಾರೆ.

ಶಿಕ್ಷಕಿಯು ಜೂನ್ 15ರಂದು olx ನಲ್ಲಿ 1947ನೇ ಇಸವಿಯ 1 ರೂ. ನಾಣ್ಯವೊಂದು ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕಿ ತನ್ನ ಮೊಬೈಲ್ ನಂಬರ್ ಅಪ್ಲೋಡ್ ಮಾಡಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ, 1 ರೂ. ನಾಣ್ಯವನ್ನು 1 ಕೋಟಿ ರೂ.ಗೆ ಖರೀದಿ ಮಾಡುವುದಾಗಿ ನಂಬಿಸಿದ್ದ ಆನಂತರ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ಸ್ಕ್ರೀನ್ ಶಾಟ್ ತೆಗೆದು ಶಿಕ್ಷಕಿಗೆ ವಾಟ್ಸ್ ಆಯಪ್ ಮಾಡಿದ್ದ. ಇದನ್ನು ನಂಬಿದ್ದ ಶಿಕ್ಷಕಿಗೆ ಎಷ್ಟು ಹೊತ್ತಾದರು ಹಣ ಖಾತೆಗೆ ಬಂದಿಲ್ಲ.

ಆಗ ಶಿಕ್ಷಕಿ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ.ವಂಚಕ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಶುಲ್ಕ ಪಾವತಿ ಮಾಡ ಬೇಕೆಂದು ನಂಬಿಸಿ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ಇದಾದ ಮೇಲೆ ಮತ್ತೆ ಅರ್ ಬಿ ಐ ಶುಲ್ಕ ತೆರಿಗೆ ಹೀಗೆ ನಾನಾ ನೆಪದ ಲ್ಲಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗೆ 1 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಶಿಕ್ಷಕಿ ಬ್ಯಾಂಕ್ ಖಾತೆಗೆ ಯಾವುದೇ ಹಣ ವರ್ಗಾವಣೆ ಆಗಿಲ್ಲ. ವಂಚಕ ಮತ್ತೆ ಹಣ ಕೇಳಿದಾಗ ಅನುಮಾನ ಬಂದ ಶಿಕ್ಷಕಿ, ಹಣ ಪಡೆದ ಆರೋಪಿ ವಿರುದ್ಧ ದೂರು ನೀಡಿದ್ದಾರೆ.ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ ಬಡಿಗೇರ ಮತ್ತು ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.