ಹುಬ್ಬಳ್ಳಿ –
ಕಾರು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ನಡೆದಿದೆ. ಗದಗ ರಸ್ತೆಯ ಬಂಡಿವಾಡ ಕ್ರಾಸ್ ಬಳಿ ಈ ಒಂದು ಅಪಘಾತವಾಗಿದ್ದು ಇನ್ನೊವ್ವಾ ಕಾರು ಮತ್ತು ಬೆಲೆನೋ ಕಾರಿನ ಮಧ್ಯೆ ರಸ್ತೆ ಅಪಘಾತವಾಗಿದೆ.

ಅಪಘಾತಕ್ಕೇ ಸ್ಥಳದಲ್ಲೇ ಇಬ್ಬರು ದುರ್ಮರಣವಾಗಿದ್ದು ಇನ್ನೂ ಹಲವರು ಗಾಯಗೊಂಡಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೋವಾ ಮತ್ತು ಬಿಲ್ಯಾನೋ ಕಾರು ನಡುವೆ ಈ ಒಂದು ಅಪಘಾತವಾಗಿದ್ದು ಬಿಲೇನೋ ಕಾರಿನಲ್ಲಿದ್ದ ಇವರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಕಾರು ಕಾರು ಗಳ ಮಧ್ಯೆ ಡಿಕ್ಕಿಯಾಗಿದ್ದ ರಭಸಕ್ಕೇ ಎರಡು ಕಾರುಗಳು ನುಜ್ಜು ಗುಜ್ಜಾಗಿದ್ದು ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೂ ಮೂವರು ಸ್ಥಿತಿ ಚಿಂತಾಜನಕ. ಗಂಭೀರ ಗಾಯಗೊಂಡ ಮೂವರೂ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳು ಬಿಲ್ಯಾನೋ ಕಾರಿನಲ್ಲಿದ್ದವರೇ ಆಗಿದ್ದಾರೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಬಿಲ್ಯಾನೋ ಕಾರು.ಗದುಗಿನಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಇನ್ನೋವಾ ಕಾರಿನ ನಡುವೆ ಈ ಒಂದು ಅಪಘಾತವಾಗಿದ್ದು ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಬಳಿ ಘಟನೆ ನಡೆದಿದೆ.

ಇನ್ನೂ ಅಪಘಾತದ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಇನಸ್ಪೇಕ್ಟರ್ ರಮೇಶ ಗೋಕಾಕ ಸಿಬ್ಬಂದ್ದಿಗಳೊಂದಿಗೆ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.ಅಲ್ಲದೇ ಕೂಡಲೇ.ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿಸಿದ್ರು.ನಂತರ ಅಪಘಾತದಲ್ಲಿ ಸಾವಿಗೀಡಾದ ಇಬ್ಬರ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು ಇತ್ತ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬೆಳಗಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಸ್ಮೀತಾ ಕಟ್ಟಿ ಕೂಡಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಅವವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇನ್ನೂ ಈ ಒಂದು ಅಪಘಾತದ ವಿಷಯ ತಿಳಿದ ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ ಡಾ ಎಸ್ ಎಮ್ ಹೊನಕೇರಿ ತಮ್ಮ ಸಿಬ್ಬಂದ್ದಿಗಳೊಂದಿಗೆ ಕಿಮ್ಸ್ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ತೀವ್ರವಾಗಿ ಗಾಯಗೊಂಡಿರುವ ವೈಧ್ಯೆ ಸ್ಮೀಕಾ ಕಟ್ಟಿಯವರಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.ಇನ್ನೂ ಇತ್ತ ಅಪಘಾತದಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದು ನುಜ್ಜು ಗುಜ್ಜಾಗಿವೆ.