ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಕಳ್ಳತನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ರಿಜ್ವಾನ್ ಶಕೀಲ್ ಶಹಬಾಜ್ ಖಾನ್ ಎಂಬ ಮಹಿಳೆಯೇ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ನಲ್ಲಿದ್ದ ಚಿನ್ನದ ಸಾಮಾನು ಹಾಗೂ ಹಣ ದೋಚುತ್ತಿದ್ದಳು.

ಈ ರೀತಿಯ ಕಳ್ಳತನ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದರಿಂದ ಉಪನಗರ ಠಾಣೆ ಪೊಲೀಸರು, ಸಂಶಯದ ಮೇರೆ ರಿಜ್ವಾನಳನ್ನು ವಶಕ್ಕೆ ತಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಆಕೆಯ ಬಳಿ 40 ಗ್ರಾಂ ತೂಕದ 4 ಚಿನ್ನದ ಬಳೆ, 30 ಗ್ರಾಂ ತೂಕದ ಚಿನ್ನದ ಸರ ಒಟ್ಟು 2,10,000 ಲಕ್ಷ ಮೌಲ್ಯದ ಚಿನ್ನದ ಸಾಮಾನುಗಳು ದೊರೆತಿವೆ. ಇವೆಲ್ಲವೂ ಪ್ರಯಾಣಿಕರ ಬ್ಯಾಗ್ ನಿಂದ ಕಳ್ಳತನ ಮಾಡಿದ್ದು ಎಂದು ಗೊತ್ತಾಗಿದೆ.

ಖಚಿತವಾಗಿದ ಮಾಹಿತಿಯನ್ನು ಪಡೆದುಕೊಂಡ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ,ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ,ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧನ ಮಾಡಲಾಗಿದೆ. ಇನ್ನೂ ಸಿಬ್ಬಂದಿ ಗಳಾದ ರಮೇಶ ಬದ್ನಿ,ಕಿರಣ ಡೊಕ್ಕನ್ನವರ,ಮಹೇಶ್ ದೊಡಮನಿ, ಶ್ರೀಕಾಂತ್ ತಲ್ಲೂರ,ಆನಂದ ಬಡಿಗೇರ,ಶಶಿ ನೀಲಣ್ಣನವರ, ಚಂದ್ರು ನಡುವಿನಮನಿ, ನಾಗರಾಜ,ಬಸವರಾಜ, ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು.