ಧಾರವಾಡ –
ಚಲಿಸುತ್ತಿದ್ದ ಬಸ್ ನಿಂದ ಇಬ್ಬರು ಮಹಿಳೆಯರು ಜೀಗಿದ ಘಟನೆ ಧಾರವಾಡದ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ. ಧಾರವಾಡದಿಂದ ನವಲಗುಂದ ಕಡೆಗೆ ಬಸ್ ಹೊರಟಿತ್ತು ಶಿವಳ್ಳಿ ಗೆ ಇಬ್ಬರು ಮಹಿಳೆಯರು ಇಳಿಯಬೇಕಾಗಿತ್ತು ಆದರೆ ಊರು ದಾಟಿದೆ ಎಂದುಕೊಂಡು ಏಕಾಎಕಿಯಾಗಿ ಬಸ್ ನಿಂದ ಇಬ್ಬರು ಮಹಿಳೆಯರು ಚಲಿಸುತ್ತಿದ್ದ ಬಸ್ ನಿಂದ ಕೆಳಗೆ ಜೀಗಿದಿದ್ದಾರೆ.
ಇಬ್ಬರು ಮಹಿಳೆಯರು ಕೆಳಗೆ ಜೀಗಿಯುತ್ತಿದ್ದಂತೆ ಇದನ್ನು ನೋಡಿದ ಸ್ಥಳದಲ್ಲಿದ್ದ ಶಿವಳ್ಳಿ ಗ್ರಾಮದ ಇಬ್ಬರು ಯುವಕರು ಕೂಡಲೇ ಸ್ಥಳಕ್ಕೇ ಆಗಮಿಸಿ ದರು. ಸುರೇಶ ಬಡಪ್ಪನವರ ಮತ್ತು ಗೆಳೆಯರು ಸ್ಥಳಕ್ಕೇ ಆಗಮಿಸಿ ತೀವ್ರವಾಗಿ ಗಾಯಗೊಂಡ ಇಬ್ಬರು ಮಹಿಳೆಯರಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ನಂತರ ಅವರಿಗೆ ನೀರನ್ನು ಕುಡಿಸಿ ಹಾರೈಕೆ ಮಾಡಿದರು.
ಸುರೇಶ ಅವರೊಂದಿಗೆ ಮಂಜು ಕದಂ,ನಾಗು ಹೈಬತ್ತಿ, ಸೇರಿದಂತೆ ಹಲವು ಯುವಕರು ಇಬ್ಬರು ಮಹಿಳೆಯಿರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹಾರೈಕೆ ಮಾಡಿ ಮಾನಿವೀಯತೆಮೆರೆದರು.ಇನ್ನೂ ಬಸ್ ನಿರ್ವಾಹಕ ಯಾಕೆ ಹೀಗೆ ಮಾಡಿದ್ದಾರೆ ಎಂಬ ಕುರಿತಂತೆ ಗ್ರಾಮಸ್ಥರು ಮಹಿಳೆಯರೊಂದಿಗೆ ಮಾಹಿತಿಯನ್ನುಪಡೆದುಕೊಳ್ಳುತ್ತಿದ್ದಾರೆ.