ಧಾರವಾಡ –
ಸಂಚಾರಿ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಕೆಲವೊಮ್ಮೆ ಮಾನವೀಯತೆ ಕೆಲಸ ಕಾರ್ಯ ಮಾಡ್ತಾರೆ ಎನ್ನೊದಕ್ಕೆ ಧಾರವಾಡ ಸಂಚಾರಿ ಪೊಲೀಸರೇ ಸಾಕ್ಷಿ.

ಹೌದು ಧಾರವಾಡದ ಹಳೇ ಡಿಎಸ್ಪಿ ವೃತ್ತದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಪೇದೆ ಬಾಬು ಸವದತ್ತಿ ಕರ್ತವ್ಯದ ಮೇಲಿದ್ದರೂ ಈ ಒಂದು ಸಮಯದಲ್ಲಿ ಅಜ್ಜಿಯೊಬ್ಬರು ಸಿಕ್ಕಾಪಟ್ಟಿ

ವಾಹನಗಳ ಸಂಸಾರದಿಂದಾಗಿ ರಸ್ತೆಯನ್ನು ದಾಟಲಾಗದೇ ನಿಂತುಕೊಂಡಿದ್ದರು. ಈ ಒಂದು ಸಮಯದಲ್ಲಿ ಪೇದೆ ಬಾಬು ಸವದತ್ತಿ ಅಜ್ಜಿಯನ್ನು ರಸ್ತೆ ದಾಟಿಸಿದರು.

ಸರಿಯಾಗಿ ನಡೆಯಲು ಬಾರದ ಅಜ್ಜಿ ರಸ್ತೆಯಲ್ಲಿ ಈ ಕಡೆಯಿಂದ ಆ ಕಡೆಗೆ ಹೋಗಲು ಪರದಾಡುತ್ತಿದ್ದರು ಈ ಒಂದು ಸಮಯದಲ್ಲಿ ಬಾಬು ಸವದತ್ತಿ ಅವರು ಅಜ್ಜಿಯನ್ನು ರಸ್ತೆ ದಾಟಿಸಿದ್ದಾರೆ.
ಕೈ ಹಿಡಿದು ರಸ್ತೆ ದಾಟಿಸಿ ಮಾನವೀಯತೆ ಕೆಲಸ ಮಾಡಿದ್ದಾರೆ. ಕರ್ತವ್ಯದ ನಡುವೆಯೂ ಹೀಗೆ ಒಳ್ಳೆಯ ಕೆಲಸ ಮಾಡಿದ ಇವರ ಕಾರ್ಯವನ್ನು ಯುವಕ ಜಿಲಾನಿ ಖಾಜಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಮೆಚ್ಚುಗೆ ವ್ಯಕ್ತವಾಗಿದೆ.
